ಪಾಲಕ್ಕಾಡ್: ಸಿಪಿಎಂ ಬ್ರಾಂಚ್ ಕಾರ್ಯದರ್ಶಿಯನ್ನು ಪೋಕ್ಸೋ ಪ್ರಕರಣದಲ್ಲಿ ಸೆರೆಹಿಡಿಯಲಾಗಿದೆ. ಪುದುನಗರಂ ಚೆಟ್ಟಿಯತ್ ಕುಳಂಬು ಬ್ರಾಂಚ್ ಕಾರ್ಯದರ್ಶಿ ವಾರಿಯತ್ತುಕುಳಂ ಎನ್. ಶಾಜಿ (35) ಸೆರೆಯಾದ ವ್ಯಕ್ತಿ. ಮಂಗಳವಾರ ಬೆಳಿಗ್ಗೆ ಪ್ರಕರಣಕ್ಕೆ ಆಸ್ಪದವಾದ ಘಟನೆ ನಡೆದಿದೆ. ಕೊಡುವಾಯೂರಿನಲ್ಲಿ ಕ್ರೀಡಾ ಉಪಕgಣಗಳನ್ನು ಮಾರಾಟ ಮಾಡುವ ಅಂಗಡಿ ಶಾಜಿಗಿದೆ. ಜೆರ್ಸಿ ಖರೀದಿಗೆಂದು ಅಂಗಡಿಗೆ ಬಂದ ಹತ್ತನೇ ತರಗತಿ ವಿದ್ಯಾರ್ಥಿಗೆ ಶಾಜಿ ತನ್ನ ಖಾಸಗಿ ಅಂಗವನ್ನು ತೋರಿಸಿರುವುದಾಗಿಯೂ, ಹಡುಗನಲ್ಲೂ ಅದೇ ರೀತಿ ತೋರಿಸಲು ಆಗ್ರಹಿಸಿರುವು ದಾಗಿಯೂ ದೂರಲಾಗಿದೆ. ಬಾಲಕರ ಹೆತ್ತವರು ನೀಡಿದ ದೂರಿನಂತೆ ಕೇಸು ದಾಲಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಶಾಜಿಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.
