ಕಣ್ಣೂರು: ಇರಿಕ್ಕೂರು ಕಲ್ಯಾಟ್ ಎಂಬಲ್ಲಿರುವ ಪತಿ ಮನೆಯಿಂದ ಕರ್ನಾ ಟಕದ ಹುಣಸೂರು ನಿವಾಸಿಯಾದ ದರ್ಶಿತ ಎಂಬಾಕೆ ಕಳವು ನಡೆಸಿದ 30 ಪವನ್ ಚಿನ್ನಾಭರಣಗಳನ್ನು ಲಪಟಾ ಯಿಸಿರುವುದು ಮಂತ್ರವಾದಿಯಾಗಿದ್ದಾನೆಂದು ಸಾಬೀತುಗೊಂಡಿದೆ. ಈ ಹಿನ್ನೆಲೆಯಲ್ಲಿ ಮಂತ್ರವಾದಿಯಾದ ಹಾಸನ ತಟ್ಟೇಕರ ಸಿಂಗಪಟ್ಟಣದ ಮಂಜುನಾಥ (39) ಎಂಬಾತನನ್ನು ಇರಿಕ್ಕೂರು ಪೊಲೀಸರು ಬಂಧಿಸಿದ್ದಾರೆ. ಪ್ರೇತಬಾಧೆ ಹೋಗಲಾಡಿಸುವುದಾಗಿ ತಿಳಿಸಿ ದರ್ಶಿತಳ ಕೈಯಿಂದ 2ಲಕ್ಷ ರೂ. ಹಾಗೂ 30 ಪವನ್ ಚಿನ್ನಾಭರಣಗ ಳನ್ನು ಮಂತ್ರವಾದಿ ಪಡೆದುಕೊಂಡಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 22ರಂದು ಇರಿಕ್ಕೂರು ಕಲ್ಯಾಟ್‌ನ ಸುಭಾಷ್‌ರ ಮನೆಯಿಂದ 30 ಪವನ್ ಚಿನ್ನಾಭರಣ ಹಾಗೂ 4 ಲಕ್ಷ ರೂಪಾಯಿ ತೆಗೆದುಕೊಂಡು ಪತ್ನಿ ದರ್ಶಿತ ಎರಡೂವರೆ ವರ್ಷ ಪ್ರಾಯದ ಪುತ್ರಿಯೊಂದಿಗೆ ಕರ್ನಾಟಕದಲ್ಲಿರುವ ಸ್ವಂತ ಮನೆಗೆ ಹೋಗಿದ್ದಳು. ಈ ಬಗ್ಗೆ ಮನೆಯವರು ನೀಡಿದ ದೂರಿನಂತೆ ಇರಿಕ್ಕೂರು ಪೊಲೀಸರು ಕೇಸು ದಾಖ ಲಿಸಿಕೊಂಡಿದ್ದರು. ತನಿಖೆ ನಡೆಯುತ್ತಿ ರುವಂತೆ ದರ್ಶಿತಳ ಮೃತದೇಹ ಹುಣಸೂರಿನ ಲಾಡ್ಜ್ ಕೊಠಡಿಯಲ್ಲಿ ಪತ್ತೆಯಾಗಿತ್ತು. ಬಾಯಿಯಲ್ಲಿ ಡೈನಾಮಿಟ್ ಸ್ಫೋಟಗೊಂಡು ಸಾವಿಗೀಡಾದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿತ್ತು. ಯುವತಿಯೊಂದಿಗೆ ಕೊಠಡಿ ಪಡೆದ ಪ್ರಿಯತಮ ಸಿದ್ಧರಾಜು ಈ ಕೊಲೆ ನಡೆಸಿದ್ದನೆನ್ನಲಾಗಿದೆ. ಯುವತಿ ಪತಿ ಮನೆಯಿಂದ ಕಳವು ನಡೆಸಿದ ೪ ಲಕ್ಷ ರೂಪಾಯಿಯಿಂದ 2 ಲಕ್ಷ ರೂಪಾಯಿಗಳನ್ನು ಸಿದ್ಧರಾಜು ಪಡೆದುಕೊಂಡಿದ್ದನು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿದ್ಧರಾಜುವನ್ನು ಹಾಸನ ಪೊಲೀಸರು ಬಂಧಿಸಿದ್ದರು. ಕಳವಿಗೆ ಸಂಬಂಧಿಸಿ ಇರಿಕ್ಕೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. 2 ಲಕ್ಷ ರೂಪಾಯಿ ದರ್ಶಿತಳ ಮನೆ ಸಮೀಪದ ಮಂತ್ರವಾದಿಯಾದ ಮಂಜುನಾಥ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ. ಈ ಹಣವನ್ನು ಇರಿ ಕ್ಕೂರು ಪೊಲೀಸರು ಮಂಜುನಾಥನ ಮನೆಯಿಂದ ಪತ್ತೆಹಚ್ಚಿದ್ದಾರೆ. ಆದರೆ ಕಳವಿಗೀಡಾದ 30 ಪವನ್ ಚಿನ್ನಾಭರಣ ಯಾರ ಕೈಯಲ್ಲಿದೆ ಎಂದು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಸಿದ್ಧರಾಜು ಹಾಗೂ ಮಂಜುನಾಥನನ್ನು ಹಲವು ಬಾರಿ ಪೊಲೀಸರು ಪ್ರಶ್ನಿಸಿದರೂ ಯಾವುದೇ ಮಾಹಿತಿ ಲಭಿಸಿಲ್ಲ. ಕೊನೆಗೆ ಮಂಜುನಾಥನನ್ನು ಇರಿಕ್ಕೂರಿಗೆ ತಲುಪಿಸಿ ಪ್ರಶ್ನಿಸಿದಾಗ ಚಿನ್ನ ಲಭಿಸಿಲ್ಲವೆಂದು ತಿಳಿಸಿದ್ದಾನೆ. ಆದರೆ ವಿರಾಜಪೇಟೆ ಬಾಲಿಕ್ಕರ ಎಂಬಲ್ಲಿ ದರ್ಶಿತ ಓರ್ವನನ್ನು ಭೇಟಿಯಾಗಿರುವ ದೃಶ್ಯ ಪೊಲೀಸರಿಗೆ ಲಭಿಸಿದೆ. ಆ ದೃಶ್ಯವನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಆಕೆ ಭೇಟಿಯಾಗಿರು ವುದು ಮಂತ್ರವಾದಿಯನ್ನಾಗಿದೆ ಎಂದು ಖಚಿತಗೊಂಡಿದೆ. ಇದರ ಆಧಾರದಲ್ಲಿ ಮತ್ತೊಮ್ಮೆ ಆತನನ್ನು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಿದಾಗ ಮಂತ್ರವಾದಿಗೆ ತಪ್ಪೊಪ್ಪಿಕೊಳ್ಳಲೇಬೇಕಾಯಿತು. ಪ್ರೇತಬಾಧೆ ಹೋಗಲಾಡಿಸಲು 2 ಲಕ್ಷ ರೂಪಾಯಿ ಮಾತ್ರವಲ್ಲದೆ ಚಿನ್ನವನ್ನೂ ಪಡೆದುಕೊಂಡಿರುವುದಾಗಿ ಮಂತ್ರವಾದಿ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಇರಿಕ್ಕೂರು ಪೊಲೀಸರು ಬಂಧಿಸಿದ್ದಾರೆ. ಈ ಕಳವು ಪ್ರಕರಣದಲ್ಲಿ ದರ್ಶಿತ 1ನೇ ಆರೋಪಿ ಹಾಗೂ ಮಂತ್ರವಾದಿ 2ನೇ ಆರೋಪಿಯಾಗಿದ್ದಾನೆ.