ಮುಳ್ಳೇರಿಯ: ಬೋವಿಕ್ಕಾನ ಮೂಲಡ್ಕದಲ್ಲಿ ಗಲ್ಫ್ ಉದ್ಯೋಗಿ ಮನೆಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಆದೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೂಲಡ್ಕ ಬಳಿಯ ಕಾವುಪಡಿ ಎಂಬಲ್ಲಿನ ಅಬ್ದುಲ್ ಖಾದರ್‌ರ ಮನೆಯಲ್ಲಿ ಕಳವು ನಡೆದಿದೆ. ಅಬ್ದುಲ್ ಖಾದರ್‌ರ ಪತ್ನಿ ಹಾಗೂ ಮಕ್ಕಳು ಚೌಕಿಯ ಸಂಬಂಧಿಕರ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಮನೆಗೆ ನುಗ್ಗಿದ ಕಳ್ಳರು ಕಪಾಟುಗಳಲ್ಲಿದ್ದ ಹಣ ಕಳವು ನಡೆಸಿದ್ದಾರೆ. ಮೊನ್ನೆ ರಾತ್ರಿ ಮನೆಯ ಬಾಗಿಲು ಮುರಿದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸಮೀಪದ ಸಂಬಂಧಿಕರು ಮನೆ ಮಂದಿಗೆ ಮಾಹಿತಿ ನೀಡಿದ್ದರು.
