ಎಂಬಿಬಿಎಸ್: ಜಿಲ್ಲೆಯಿಂದ ಪ್ರವೇಶ ಲಭಿಸಿದ್ದು ಏಕ ವಿದ್ಯಾರ್ಥಿನಿಗೆ ಮಾತ್ರ

ಉಕ್ಕಿನಡ್ಕ: ಉಕ್ಕಿನಡ್ಕದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷ ಎಂಬಿಬಿಎಸ್ ಕೋರ್ಸ್‌ನ ಉದ್ಘಾಟನೆಯನ್ನು ರಾಜ್ಯ ಆರೋಗ್ಯ ಖಾತೆ ಸಚಿವೆ ವೀಣಾ ಜೋರ್ಜ್ ಇಂದು ಬೆಳಿಗ್ಗೆ ನೆರವೇರಿಸಿದ್ದಾರೆ. ವಿಶೇಷವೇನೆಂದರೆ ಈ ಪ್ರಥಮ ವರ್ಷದ ಕೋರ್ಸ್‌ಗೆ ಕಾಸರಗೋಡು ಜಿಲ್ಲೆಯಿಂದ ಪಾಣತ್ತೂರು ಸಮೀಪದ ಮೈಲಾಟಿಯ ಎ.ಆರ್. ಆಶಿಕಾರಾಜ್‌ಗೆ ಮಾತ್ರವೇ ಪ್ರವೇಶ ಲಭಿಸಿದೆ. ಈಕೆ ಮೈಲಾಟಿಯ ಕೆ. ರಾಜೇಂದ್ರನ್-ಕಳ್ಳಾರು ಗ್ರಾಮ ಪಂಚಾಯತ್ ಓವರ್‌ಸೀಯರ್ ಇ. ರಾಧಾಮಣಿ ದಂಪತಿಯ ಪುತ್ರಿಯಾಗಿದ್ದಾಳ.

ಕಾಸರಗೋಡು ಸರಕಾರಿ ವೈದ್ಯಕೀಯ ಕಾಲೇಜಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ ಎಂಸಿ) ಒಟ್ಟು ೫೦ ಸೀಟು ಮಂಜೂರು ಮಾಡಿದೆ. ಇದರಲ್ಲಿ ಅಖಿಲ ಭಾರತ ಕ್ವಾಟಾದಂತೆ ೪೦ ಮಂದಿಗೆ ಈಗಾಗಲೇ ಪ್ರವೇಶ ಲಭಿಸಿದೆ. ಬಾಕಿ ಉಳಿದ ಸೀಟುಗಳಿಗೆ ದ್ವಿತೀಯ ಹಂತದಲ್ಲಿ ಅಲೋಟ್‌ಮೆಂಟ್‌ನಲ್ಲಿ ಪ್ರವೇಶ ನೀಡಲಾಗುವುದು. ಹೈಯರ್ ಆಪ್ಶನ್ ನೀಡಿ ಅಲೋಟ್‌ಮೆಂಟ್ ಕ್ರಮಗಳು ಪೂರ್ತಿಯಾದ ಬಳಿಕವಷ್ಟೇ ಇನ್ನು ಪ್ರಥಮ ವರ್ಷ ಎಂಬಿಬಿಎಸ್ ತರಗತಿಗಳು ವಿದ್ಯುಕ್ತವಾಗಿ ಆರಂಭಗಳ್ಳಲಿದೆ.

ಅಕಾಡೆಮಿಕ್ ಬ್ಲೋಕ್, ವಿದ್ಯಾರ್ಥಿನಿಯರ ಹಾಸ್ಟೆಲ್ ಮತ್ತು ಸ್ಟಾಫ್ ಕ್ವಾರ್ಟರ್ಸ್‌ನ ನಿರ್ಮಾಣ ಕೆಲಸಗಳು ಈಗಾಗಲೇ ಪೂರ್ಣಗೊಂ ಡಿವೆ. ವಿದ್ಯುತ್ತೀಕರಣ ಕೆಲಸಗಳು ಇನ್ನೂ ಬಾಕಿ ಇದೆ. ಆದರೆ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡದ ನಿರ್ಮಾಣ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಗಂಡು ಮಕ್ಕಳ ಹಾಸ್ಟೆಲ್ ಮತ್ತು ಅಧ್ಯಾಪಕರ ಕ್ವಾರ್ಟರ್ಸ್‌ಗಳ ನಿರ್ಮಾಣ ಇನ್ನಷ್ಟೇ ನಡೆಯಬೇಕಾಗಿದೆ.

ಇದು ಪೂರ್ಣಗೊಳ್ಳುವ ತನಕ ಚೆರ್ಕಳದಲ್ಲಿ ತಾತ್ಕಾಲಿಕ ಹಾಸ್ಟೆಲ್ ಸೌಕರ್ಯ ಏರ್ಪಡಿಸ ಲಾಗಿದೆ.  ಡಾ| ಪಿ.ಎಸ್. ಇಂದು ರನ್ನು ಕಾಸರಗೋಡು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರನ್ನಾಗಿ ನೇಮಿಸಲಾಗಿದೆ.

You cannot copy contents of this page