ಕಾಸರಗೋಡು: ಕಾಞಂಗಾಡ್ ನಿವಾಸಿಯಾದ ಯುವ ಇಂಜಿನಿಯರ್ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕಾಞಂಗಾಡ್ ಸೌತ್ ಮಾತೋಪ್ ಕ್ಷೇತ್ರದ ಬಳಿಯ ನಿವಾಸಿ ಯು.ಕೆ. ಜಯಪ್ರಕಾಶ್‌ರ ಪುತ್ರ ಪ್ರಣವ್ (33) ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದಾರೆ. ತಂದೆ ನೀಡಿದ ದೂರಿನಂತೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಈ ಮಧ್ಯೆ ಪ್ರಣವ್‌ರ ಮೊಬೈಲ್ ಫೋನ್, ಚಪ್ಪಲಿ ಹಾಗೂ ಸಣ್ಣ ಪತ್ರ ವೊಂದು ಬೇಕಲಕೋಟೆ ಸಮೀಪದ ಕಡಪ್ಪುರದಿಂದ ಸ್ಥಳೀಯನಾದ ಓರ್ವ ಪತ್ತೆ ಮಾಡಿದ್ದಾರೆ. ಫೋನ್‌ಗೆ ಬಂದ ಕರೆಯನ್ನು ಸ್ವೀಕರಿಸಿದಾಗ ಈ ಮೊಬೈಲ್ ಪ್ರಣವ್‌ನದ್ದೆಂದು ತಿಳಿದು ಬಂದಿದೆ. ಕೂಡಲೇ ಬೇಕಲ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಅವರು ಸ್ಥಳಕ್ಕೆ ತಲುಪಿ ಫೋನ್ ಹಾಗೂ ಇತರ ಸಾಮಗ್ರಿಗಳನ್ನು ಕಸ್ಟಡಿಗೆ ತೆಗೆದರು.
‘ಎಲ್ಲರೂ ಕ್ಷಮಿಸಿ’ ಎಂದು ಪತ್ರದಲ್ಲಿ ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಣವ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಬೇಕಲ ಸಮು ದ್ರದಲ್ಲಿ ಓರ್ವ ಯುವಕ ನಾಪತ್ತೆಯಾಗಿ ರುವುದಾಗಿ
ಶಂಕೆ ಇದೆ ಎಂದೂ, ಕೋಟೆ ಯಿಂದ ಆರಂಭಿಸಿ ಕಾಸರಗೋಡು ಭಾಗಗಳಲ್ಲೂ, ಪಳ್ಳಿಕ್ಕೆರೆ, ಚಿತ್ತಾರಿ, ಅಜಾನೂರು, ಮೀನಾಪಿಸ್ ನೀಲೇಶ್ವರ ಭಾಗಗಳಲ್ಲೂ ಹುಡುಕಾಟ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಯಾವುದಾದರೂ ಸುಳಿವು ಸಿಕ್ಕಿದರೆ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಪೊಲೀಸರು ತಿಳಿಸಿದ್ದಾರೆ.