. ಸಮಗ್ರ ವಿಜಿಲೆನ್ಸ್ ತನಿಖೆ ಆರಂಭ . 26 ವರ್ಷಗಳ ವ್ಯವಹಾರಗಳ ಬಗ್ಗೆಯೂ ತನಿಖೆ . ಪ್ರಾಯೋಜಕರು ತನಿಖಾ ವ್ಯಾಪ್ತಿಯಲ್ಲಿ
ಶಬರಿಮಲೆ: ಶಬರಿಮಲೆ ದೇವ ಸ್ಥಾನದ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ತಾಮ್ರದ ಕವಚದಲ್ಲಿದ್ದ ಚಿನ್ನ ನಾಪತ್ತೆಯಾಗಿರುವುದು ಭಾರೀ ನಿಗೂಢತೆಗಳಿಗೆ ದಾರಿಮಾಡಿಕೊಡು ತ್ತಿದೆ. ಆ ಬಗ್ಗೆ ಕೇರಳ ಹೈಕೋರ್ಟ್ ನೀಡಿದ ನಿರ್ದೇಶ ಪ್ರಕಾರ ವಿಜಿಲೆನ್ಸ್ ವಿಭಾಗ ಸಮಗ್ರ ತನಿಖೆ ಆರಂಭಿಸಿದೆ.
ಇದೇ ಸಂದರ್ಭದಲ್ಲಿ ಶಬರಿಮಲೆ ದೇವಸ್ಥಾನದಲ್ಲಿ 1999ರಿಂದ 2025ರ ತನಕದ ಅವಧಿಯಲ್ಲಿ ನಡೆದ ಎಲ್ಲಾ ಚಿನ್ನದ ವ್ಯವಹಾರದ ಬಗ್ಗೆಯೂ ಸಮಗ್ರ ತನಿಖೆ ನಡೆಸಿ ವಾಸ್ತವತೆಯನ್ನು ಹೊರತರಲು ತಿರುವಿದಾಂಕೂರು ಮುಜರಾಯಿ ಮಂಡಳಿ ಇನ್ನೊಂದೆಡೆ ತೀರ್ಮಾನಿಸಿದೆ. ಶಬರಿಮಲೆ ದೇಗುಲದ ದ್ವಾರಪಾಲಕ ವಿಗ್ರಹಕ್ಕೆ ಹೊದಿಸಲಾಗಿದ್ದ 42.8 ಕೆಜಿ ಚಿನ್ನದಲ್ಲಿ 42.5 ಕೆಜಿ ಚಿನ್ನ ಬಳಿಕ ದಿಢೀರ್ ನಾಪತ್ತೆಯಾಗಿತ್ತು. ಅದು ಭಾರೀ ವಿವಾದಕ್ಕೆ ದಾರಿಮಾಡಿಕೊಟ್ಟಿರು ವಂತೆಯೇ ಆ ಚಿನ್ನವನ್ನು ಕೊಡುಗೆ ರೂಪದಲ್ಲಿ ನೀಡಿದ್ದ ತಿರುವಂತಪುರ ವೆಂಙಾg ಮೂಡ್ ನಿವಾಸಿ ಹಾಗೂ ಪ್ರಸ್ತುತ ಬೆಂ ಗಳೂರಿನಲ್ಲಿ ನೆಲೆಸಿರುವ ಉಣ್ಣಿಕೃಷ್ಣನ್ ಪೋತ್ತಿಯವರ ಸಂಬಂಧಿಕರೋರ್ವರ ಮನೆಯಿಂದ ವಿಜಿಲೆನ್ಸ್ ವಿಭಾಗ ಪತ್ತೆಹ ಚ್ಚಿತ್ತು. ಇದರಿಂದಾಗಿ ಪೋತ್ತಿಯವರನ್ನು ತನಿಖಾ ವ್ಯಾಪ್ತಿಗೊಳಪಡಿಸಲು ವಿಜಿಲೆನ್ಸ್ ತೀರ್ಮಾನಿಸಿದೆ. ಅದರಂತೆ ನಾಳೆ ಅವರನ್ನು ವಿಚಾರಣೆಗೊಳಪಡಿಸಲು ವಿಜಿಲೆನ್ಸ್ ತೀರ್ಮಾನಿಸಿದೆ.
ದ್ವಾರಪಾಲಕ ಮೂರ್ತಿಗಳ ಕವಚಗಳಿಗೆ ಚಿನ್ನದ ಲೇಪನ ಕೊಡುಗೆಯಾಗಿ ನೀಡಿದ್ದ ಪೋತ್ತಿ ಚಿನ್ನದ ಆ ಲೇಪನದ ಹೆಸರಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾನದಲ್ಲಿಯೂ ಭಾರೀ ಹಣ ಸಂಗ್ರಹಿಸಿದ್ದಾರೆಂದು ತನಿಖಾ ತಂಡ ಶಂಕಿಸಿದೆ. ಇದರೊಂದಿಗೆ ಬೆಂಗಳೂರು ಮೂಲಕ ಇಬ್ಬರು ಶಾಮೀಲಾಗಿದ್ದಾರೆಂಬ ಮಾಹಿತಿಯೂ ತನಿಖಾ ತಂಡಕ್ಕೆ ಲಭಿಸಿದೆ. ಪೋತ್ತಿ ಬೆಂಗಳೂರಿನ ಶ್ರೀರಾಂಪುರ ದೇವಾಲಯದಲ್ಲಿ ಸಹಾಯಕ ಅರ್ಚಕರಾಗಿ ಈ ಹಿಂದೆ ಕೆಲಸ ಮಾಡಿದ್ದರು. 2004ರಲ್ಲಿ ಅವರನ್ನು ಆ ಕೆಲಸದಿಂದ ತೆಗೆದುಹಾಕಲಾಗಿತ್ತು. ಸುಮಾರು 10 ವರ್ಷಗಳ ಹಿಂದೆ ಶಬರಿಮಲೆಯ ಕಿರಿಯ ಅರ್ಚಕ ನೋರ್ವರ ಜೊತೆಗೆ ಸಹಾಯಕರಾ ಗಿಯೂ ಅವರು ಕೆಲಸ ಮಾಡಿದ್ದರು. ಬೆಂಗಳೂರಿನಿಂದ ಈಗ ತಿರುವನಂತ ಪುರಕ್ಕೆ ಆಗಮಿಸಿರುವ ಪೋತ್ತಿ ತನ್ನ ಮೇಲೆ ಹೊರಿಸಲಾಗಿರುವ ಆರೋಪ ಗಳೆಲ್ಲವನ್ನೂ ಸಾರಾಸಗಟಾಗಿ ನಿರಾಕರಿಸಿ ದ್ದಾರೆ. ಈ ವಿಷಯದಲ್ಲಿ ನನ್ನ ನಿಲುವನ್ನು ನ್ಯಾಯಾಲಯದಲ್ಲಿ ತಿಳಿಸುವುದಾಗಿ ಅವರು ಹೇಳಿದ್ದಾರೆ. ಚಿನ್ನ ನಾಪತ್ತೆಯಾದ ವಿಷಯದಲ್ಲಿ ಮುಜರಾಯಿ ಮಂಡಳಿ ನೀಡುತ್ತಿರುವ ಹೇಳಿಕೆಗಳೂ ಇನ್ನೊಂ ದೆಡೆ ಗೊಂದಲರಕ್ಕೆ ದಾರಿ ಮಾಡತೊಡ ಗಿದೆ. ಉದ್ಯಮಿ ವಿಜಯ್ ಮಲ್ಯ ಶಬರಿಮಲೆಗೆ ಕೊಡುಗೆಯಾಗಿ ನೀಡಿದ ಚಿನ್ನ ಎಲ್ಲಿ ಹೋಯಿತೆಂಬುವುದು ಇನ್ನೂ ಸ್ಪಷ್ಟಗೊಳ್ಳದೆ ಆ ವಿಷಯ ನಿಗೂಢತೆಯಲ್ಲಿದೆ.