ತನ್ನ ವಿರುದ್ಧ ಸೈಬರ್ ಆಕ್ರಮಣ ಮುಂದುವರಿಸಿದರೆ ಹಲವು ವಿಷಯ ಬಹಿರಂಗಪಡಿಸುವೆ- ರಿನಿ ಆನ್‌ಜಾರ್ಜ್

ಕೊಚ್ಚಿ: ಸಿಪಿಎಂ ಪರವೂರು ಏರಿಯಾ ಸಮಿತಿ ನಡೆಸಿದ ಮಹಿಳಾ ಪ್ರತಿರೋಧ ಸಂಗಮದಲ್ಲಿ ಭಾಗವಹಿಸಿ ರುವುದಕ್ಕೆ ವಿವರಣೆ ನೀಡಿ ನಟಿ ರಿನಿ ಆನ್ ಜಾರ್ಜ್ ರಂಗಕ್ಕಿಳಿದಿದ್ದಾರೆ. ಯಾವುದೇ ರಾಜಕೀಯ ಪಕ್ಷದವಳೆಂಬ ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಲ್ಲ. ನನ್ನನ್ನು ಆಹ್ವಾನಿಸಿದ ಕಾರಣ ಹೋಗಿದ್ದೇನೆ. ತನ್ನ ರಾಜಕೀಯ ನಿಲುವು ಎಂಬುದು ಮಹಿಳೆಯರ ಪರವಾಗಿದೆ. ಯಾವುದೇ ಪಕ್ಷದಲ್ಲಿ ಸದಸ್ಯೆಯಲ್ಲ ಎಂದು ಅವರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಗ್ಗೆ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆ ಮಧ್ಯೆ ನಟಿ ಈ ವಿಷಯ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ತನ್ನ ವಿರುದ್ಧ ಆರೋಪ ಹೊರಿಸುವವರು ಮೌನ ವಹಿಸದಿದ್ದರೆ ನನಗೆ ತಿಳಿದಿರುವ ಹಲವು ವಿಚಾರವನ್ನು ಬಹಿರಂಗಪಡಿಸುವೆ. ಆದರೆ ಅದು ಹಲವರಿಗೆ ತಾಳಿಕೊಳ್ಳಲು ಸಾಧ್ಯವಾಗದ ವಿಷಯವಾಗಿರಬಹುದು. ಆದ್ದರಿಂದ ತನ್ನನ್ನು ದ್ರೋಹಿಸದೆ ಇರುವುದು ಉತ್ತಮ ಎಂದು ನಟಿ ತಿಳಿಸಿದ್ದಾರೆ. ಸಿಪಿಎಂ ಪರವೂರು ಏರಿಯಾ ಸಮಿತಿ ನಡೆಸಿದ ಕಾರ್ಯಕ್ರಮದಲ್ಲಿ ಈಕೆ ಭಾಗವಹಿಸಿದ್ದರು.

You cannot copy contents of this page