ಕಾಸರಗೋಡು: ಉದ್ಯೋಗ ಅವಕಾಶಕ್ಕಾಗಿ ವಿದೇಶಗಳಿಗೆ ವಲಸೆ ಹೋಗುತ್ತಿದ್ದ ಯುವ ಜನಾಂಗವನ್ನು ಉದ್ಯಮಿಗಳಾಗಿ, ಉದ್ಯೋಗದಾತರಾಗಿ ಮಾಡಿದ್ದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು.
ಬಿಜೆಪಿ ಜಿಲ್ಲಾ ಹೆಲ್ಫ್ ಡೆಸ್ಕ್‌ನ ಆಶ್ರಯದಲ್ಲಿ ಆಯೋಜಿಸಿದ ಏಕದಿನ ಉದ್ಯಮತ್ವ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. 2047ರಲ್ಲಿ ಅಭಿವೃದ್ಧಿಗೊಂಡ ಭಾರತ ಎಂಬ ಗುರಿ ಹೊಂದಲು ಆಂತರಿಕ ಉತ್ಪಾದನೆ ಹೆಚ್ಚಿಸಿ, ಸ್ವದೇಶಿ ಉತ್ಪನ್ನಗಳ ಉಪಯೋಗ ಹೆಚ್ಚಿಸಬೇಕೆಂದು ಅಶ್ವಿನಿ ಸೂಚಿಸಿದರು. ರಾಂ ಬಯೋಟೆಕ್ ಫ್ಯೂವಲ್ಸ್‌ನ ಮೆನೇಜಿಂಗ್ ಡೈರೆಕ್ಟರ್ ರಾಜೀವನ್ ಎಂ ಅಧ್ಯಕ್ಷತೆ ವಹಿಸಿದರು. ಕಾರಡ್ಕ ಬ್ಲೋಕ್ ಇಂಡಸ್ಟ್ರಿಯಲ್ ಎಕ್ಸ್‌ಟೆನ್ಶನ್ ಆಫೀಸರ್ ಉಮೇಶ್, ಆಟೋಮೇಟಿವ್ ಕ್ಲಸ್ಟರ್ ಅಧ್ಯಕ್ಷ ರವೀಂದ್ರನ್ ಕಣ್ಣಂಗೈ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್, ಸೆಲ್ ಕೋ-ಆರ್ಡಿನೇಟರ್ ಸುಕುಮಾರನ್ ಕುದ್ರೆಪ್ಪಾಡಿ, ಎಸ್‌ಟಿ ಮೋರ್ಛಾ ರಾಜ್ಯ ಉಪಾಧ್ಯಕ್ಷ ಶಿಬು ಪಾಣತ್ತೂರು, ರತೀಶ್ ವಿ ಮಾತನಾಡಿದರು.