ಹೃದಯಾಘಾತ: ಮಹಿಳೆ ನಿಧನ

ಮಾರ್ಪನಡ್ಕ: ಪೊಡಿಪ್ಪಳ್ಳ ಭಂಡಾರಬೀಡು ನಿವಾಸಿ ಕೃಷ್ಣ ಬಿ.ಎಂ ಎಂಬವರ ಪತ್ನಿ ಹರಿಣಾಕ್ಷಿ (47) ನಿಧನ ಹೊಂದಿದರು. ಇವರಿಗೆ ಒಂದೂವರೆ ವರ್ಷದ ಹಿಂದೆ ಹೃದಯಾಘಾತವುಂಟಾಗಿ ಶಸ್ತ್ರಚಿಕಿತ್ಸೆ ನಡೆಸಿ ಗುಣಮುಖರಾಗಿದ್ದರು. ನಿನ್ನೆ ಅಪರಾಹ್ನ ಮತ್ತೆ ಎದೆನೋವು ಉಂಟಾಗಿದ್ದು, ಕಾಸರಗೋಡು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟರು. ಇವರು ಬಂದ್ಯೋಡು ವಳಚ್ಚಲ್ ನಿವಾಸಿ ದಿ| ನಾರಾಯಣರ ಪುತ್ರಿಯಾಗಿದ್ದಾರೆ. ತಾಯಿ ಲಕ್ಷ್ಮಿ, ಪತಿ, ಮಕ್ಕಳಾದ ಕೃಪೇಶ್, ಹರ್ಷಿಣಿ,  ಸಹೋದರ-ಸಹೋದರಿಯರಾದ ಚಂದ್ರಹಾಸ, ಯತೀಶ, ರಾಜೇಶ್, ಉಷಾ, ನಯನ, ಆಶಾ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ನಿಧನಕ್ಕೆ ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತೀ ಕ್ಷೇತ್ರ ಆಡಳಿತ ಸಮಿತಿ ಸಂತಾಪ ವ್ಯಕ್ತಪಡಿಸಿದೆ.

RELATED NEWS

You cannot copy contents of this page