ಬದಿಯಡ್ಕ: ಪಂಚಾಯತ್‌ನ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿ ಜಿಲ್ಲಾಧಿಕಾರಿಗೆ ದೂರು ನೀಡಿದ ದ್ವೇಷದಿಂದ ಬೈಕ್ ತಡೆದು ನಿಲ್ಲಿಸಿ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಶೇಣಿ ಪಜ್ಜಾನ ಪುಲ್ಲಾಟ್ ಹೌಸ್‌ನ ಅಜೀಶ್ ಜೋಸೆಫ್ (33)ರ ದೂರಿನಂತೆ ಜಯಂತ, ವಸಂತ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇನ್ನಿಬ್ಬರ ವಿರುದ್ಧ ಬದಿಯಡ್ಕ ಪೊಲೀಸರು ನರಹತ್ಯಾಯತ್ನ ಕೇಸು ದಾಖಲಿಸಿಕೊಂಡಿದ್ದಾರೆ.ಕಳೆದ ಮಂಗಳವಾರ ರಾತ್ರಿ 7.30ಕ್ಕೆ ಓಣಿಬಾಗಿಲು ಎಂಬಲ್ಲಿ ಘಟನೆ ನಡೆದಿದೆ. ಅಜೀಶ್ ಜೋಸೆಫ್ ಹಾಗೂ ಸ್ನೇಹಿತ ಗಣೇಶ್ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಸ್ಕೂಟರ್‌ಗಳಲ್ಲಿ ತಲುಪಿದ ನಾಲ್ಕು ಮಂದಿ ತಡೆದು ನಿಲ್ಲಿಸಿ ಗಣೇಶ್‌ಗೆ ಹಲ್ಲೆಗೈದಿದ್ದಾರೆ. ತಡೆಯಲೆತ್ನಿಸಿದಾಗ ಅಜೀಶ್ ಜೋಸೆಫ್‌ಗೂ ಹಲ್ಲೆಗೈದುದಾಗಿ ದೂರಿನಲ್ಲಿ ತಿಳಿಸಲಾಗಿದೆ.
