ಮಧೂರು: ಅಸೌಖ್ಯ ಬಾಧಿಸಿದ್ದ ಯುವತಿ ಮೃತಪಟ್ಟ ಘಟನೆ ನಡೆದಿದೆ. ಮಧೂರು ಬಳಿಯ ಅರಂತೋಡು ನಿವಾಸಿ ತಿಮೋತಿ ಕ್ರಾಸ್ತರ ಪುತ್ರಿ ಸೌಮ್ಯಪ್ರಿಯ ಕ್ರಾಸ್ತ (25) ಮೃತ ಯುವತಿ. ಈಕೆಗೆ ಅಲ್ಪಕಾಲದಿಂದ ಅಸೌಖ್ಯ ಬಾಧಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಳೆನ್ನಲಾಗಿದೆ. ಇಂದು ಮುಂಜಾನೆ 3 ಗಂಟೆ ವೇಳೆ ಉಸಿರಾಟ ತೊಂದರೆ ಅನುಭವಗೊಂಡಿದ್ದು, ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ರಕ್ಷಿಸಲಾಗಲಿಲ್ಲ. ಮೃತಳು ತಂದೆ, ತಾಯಿ ವೆಲೆನ್ಸಿಯಾ ಡಿ’ಸೋಜಾ, ಸಹೋದರ-ಸಹೋದರಿಯರಾದ ಮೆಲ್ವಿನ್ ಕ್ರಾಸ್ತ, ಹರ್ಷಿತ್ ಪವನ್ ಕ್ರಾಸ್ತ, ಸ್ವಾತಿ ಪ್ರಿಯಾಂಕ ಕ್ರಾಸ್ತ, ಶಾಲೆನ್ ಪ್ರೀತಿ ಕ್ರಾಸ್ತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
