ಪತ್ತನಂತಿಟ್ಟ: ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ಕವಚದಿಂದ ಚಿನ್ನ ಹೇಗೆ ಮಾಯವಾಯಿತು ಎಂಬುವುದು ಈಗಲೂ ಬೇಧಿಸಲಾಗದ ನಿಗೂಢ ಪ್ರಶ್ನೆಯಾಗಿಯೇ ಮುಂದುವರಿದಿದೆ.
ಉದ್ಯಮಿ ವಿಜಯ್ ಮಲ್ಯ 1998ರಲ್ಲಿ ಚಿನ್ನ ಲೇಪಿತ ದ್ವಾರಪಾಲಕ ಮೂರ್ತಿ ಕವಚವನ್ನು ಶಬರಿಮಲೆಗೆ ಕಾಣಿಕೆ ರೂಪದಲ್ಲಿ ಸಮರ್ಪಿಸಿದ್ದರು. ಆ ಕವಚ ನಿರ್ಮಿಸಲು 33 ಕಿಲೋ ಗ್ರಾಂ ಚಿನ್ನ ಉಪಯೋಗಿಸಲಾಗಿತ್ತೆಂದು ಉದ್ಯಮಿ ವಿಜಯ್ ಮಲ್ಯ ಅಂದು ನಿಯೋಜಿಸಿದ ತಜ್ಞರು ತಿಳಿಸಿದ್ದಾರೆ. ಆ ಬಳಿಕ 2019ರಲ್ಲಿ ಆ ಕವಚ ಕೇವಲ ತಾಮ್ರವಾಗಿ ಹೇಗೆ ಬದಲಾಯಿತೆಂಬ ಪ್ರಶ್ನೆಗೆ ಸಂಬಂಧಪಟ್ಟ ಯಾರೂ ಉತ್ತರ ನೀಡುತ್ತಿಲ್ಲ. ಚಿನ್ನ ಲೇಪಿತ ಅದೇ ಕವಚಕ್ಕೆ ಮತ್ತೆ ಚಿನ್ನ ಲೇಪಿಸಲು ಕಳುಹಿಸಿಕೊಡುವುದಾದರೂ ಯಾತಕ್ಕಾಗಿ ಎಂಬ ಪ್ರಶ್ನೆಯೂ ಇದೇ ಸಂದರ್ಭದಲ್ಲಿ ಮೂಡಿದೆ. ಈ ಕವಚಕ್ಕೆ ಚಿನ್ನ ಲೇಪಿಸಲು ಅದನ್ನು ಮುಜರಾಯಿ ಮಂಡಳಿಯೇ ತನಗೆ ನೀಡಿತ್ತೆಂದು ಅದರ ಪ್ರಾಯೋಜಕ ಉಣ್ಣಿಕೃಷ್ಣನ್ ಪೋತ್ತಿ ಈಗ ಬಹಿರಂಗಪಡಿಸಿದ್ದಾರೆ. 2019 ಜುಲೈ ತಿಂಗಳ ಮುಜರಾಯಿ ಮಂಡಳಿಯ ದಾಖಲು ಪತ್ರಗಳಲ್ಲೂ ತಾಮ್ರದ ಕವಚವಾಗಿತ್ತೆಂದು ಸ್ಪಷ್ಟಪಡಿಸಲಾಗಿತ್ತು. ಆ ದಾಖಲುಪತ್ರಗಳು ಮುಜರಾಯಿ ಮಂಡಳಿಯ ಕಚೇರಿಯಿಂದ ವಿಜಿಲೆನ್ಸ್ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇಂತಹ ಬೆಳವಣಿಗೆಗಳು ಮುಜರಾಯಿ ಮಂಡಳಿಯನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸುವಂತೆ ಮಾಡಿದೆ. ಚಿನ್ನ ಲೇಪಿಸಲು ಈ ಕವಚಗಳನ್ನು ಚೆನ್ನೈಯ ಸ್ಮಾರ್ಟ್ ಕ್ರಿಯೇಶನ್ ಎಂಬ ಸಂಸ್ಥೆಗೆ ನೀಡಲಾಗಿತ್ತು. ನಮಗೆ ನೀಡಲಾದ ಕವಚ ಕೇವಲ ತಾಮ್ರದ ಕವಚವಾಗಿತ್ತು. ಅದಕ್ಕೆ ಚಿನ್ನ ಲೇಪನಗೊಳಿಸಿರಲಿಲ್ಲವೆಂದು ಆ ಸಂಸ್ಥೆ ಸ್ಪಷ್ಟಪಡಿಸಿದೆ. ಮಾತ್ರಲ್ಲ ಒಮ್ಮೆ ಚಿನ್ನ ಲೇಪಿಸಿದ ವಸ್ತುಗಳಿಗೆ ನಾವು ಮತ್ತೆ ಚಿನ್ನದ ಲೇಪನ ನಡೆಸುತ್ತಿಲ್ಲವೆಂದು ಸಂಸ್ಥೆ ತಿಳಿಸಿದೆ. ಈ ಕವಚಕ್ಕೆ ಚಿನ್ನ ಲೇಪನಗೊಳಿಸಲು ಪ್ರಾಯೋಜಕ ಉಣ್ಣಿ ಕೃಷ್ಣನ್ ಪೋತ್ತಿ ಬೆಂಗಳೂರಿನ ಕೇರಳೀಯ ರೋರ್ವರಿಂದ 35 ಲಕ್ಷ ರೂ. ಪಡೆದಿದ್ದರೆಂದು ಇನ್ನೊಂದೆಡೆ ಅವರ ಸಹೋದರ ಹೇಳಿಕೆ ನೀಡಿದ್ದಾರೆ. ಇಂತಹ ಬೆಳವಣಿಗೆ ಹಿನ್ನೆಲೆಯಲ್ಲಿ ಇದರ ತನಿಖೆಯನ್ನು ತಿರುವಿದಾಂಕೂರು ಮುಜರಾಯಿ ಮಂಡಳಿಯ ಈ ಹಿಂದಿನ ಆಡಳಿತ ಸಮಿತಿಯ ಅವಧಿಯಲ್ಲಿದ್ದ ಪ್ರಾಯೋಜಕರತ್ತವೂ ಸಾಗತೊಡಗದೆ. ಕವಚಕ್ಕೆ ಚಿನ್ನ ಲೇಪಿಸುವ ಹೆಸರಲ್ಲಿ ನಾನು ಯಾರಿಂದಲೂ ಹಣ ಸಂಗ್ರಹ ನಡೆಸಿಲ್ಲ. ಒಂದು ವೇಳೆ ಹಾಗೆ ನಡೆದಿದ್ದೇ ಆಗಿದ್ದಲ್ಲಿ ನನ್ನ ಮೇಲೆ ಕ್ರಮ ಕೈಗೊಳ್ಳಲಿ ಎಂದು ಉಣ್ಣಿಕೃಷ್ಣನ್ ಸವಾಲು ನೀಡಿದ್ದಾರೆ. ಶಬರಿಮಲೆ ಚಿನ್ನ ನಾಪತ್ತೆಯಾದ ವಿಷಯವನ್ನು ಒಂದು ಪ್ರಧಾನ ಅಸ್ತ್ರವನ್ನಾಗಿ ವಿರೋಧಪಕ್ಷಗಳು ರಾಜ್ಯ ಸರಕಾರದ ಮತ್ತು ಮುಜರಾಯಿ ಮಂಡಳಿಯಿಂದ ಹೋರಾ ಟಕ್ಕಿಳಿದಿದೆ.
ಚಿನ್ನ ವಿವಾದದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಇನ್ನೊಂದೆಡೆ ಪಂದಳಂ ರಾಜಕು ಟುಂಬದವರು ಆಗ್ರಹಪಟ್ಟಿದ್ದಾರೆ.







