ಕಾಸರಗೋಡು: ಕುಂಬಳೆ ಶಾಲಾ ಕಲೋತ್ಸವದಲ್ಲಿ ಹಮಾಸ್‌ನ್ನು ಬೆಂಬಲಿಸಿ ಮೂಕಾಭಿನಯ ಪ್ರದರ್ಶಿಸಲು ಮಕ್ಕಳನ್ನು ಒತ್ತಾಯಿಸಿದವರು ಯಾರೆಂದು ಶಿಕ್ಷಣ ಸಚಿವ ತನಿಖೆ ನಡೆಸಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರನ್ ಒತ್ತಾಯಿಸಿದ್ದಾರೆ. ಕಾಸರಗೋಡಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಕಲೋತ್ಸವದಲ್ಲಿ ಮಕ್ಕಳ ಪ್ರತಿಭೆಯನ್ನು ಪ್ರದರ್ಶಿಸುವುದು ಗುರಿಯಾಗಿದೆ. ಅಲ್ಲದೆ ಉಗ್ರಗಾಮಿ ಸಂಘಟನೆಯೆಂದು ಇಡೀ ಪ್ರಪಂಚವೇ ಆರೋಪಿಸುವ ಹಮಾಸನ್ನು ಬೆಂಬಲಿಸಿ ಸ್ಪರ್ಧೆ ಪ್ರದರ್ಶಿಸುವುದು ಸರಿಯೇ ಎಂದು ಶೋಭಾ ಸುರೇಂದ್ರನ್ ಪ್ರಶ್ನಿಸಿದ್ದಾರೆ. ದೇಶ ಅನುಸರಿಸುವ ವಿದೇಶ ನೀತಿಯನ್ನು ಪ್ರಶ್ನಿಸಲು ಯಾವ ವಿದ್ಯಾಭ್ಯಾಸ ಮಂತ್ರಿಗೆ ಅಧಿಕಾರವಿದೆಯೆಂದು ಶೋಭಾ ಸುರೇಂದ್ರನ್ ಪ್ರಶ್ನಿಸಿದ್ದಾರೆ. ಸಚಿವ ಶಿವನ್ ಕುಟ್ಟಿಯವರ ಹೇಳಿಕೆ ಹಿಂದೂ ಗಳಲ್ಲಿ ಹಾಗೂ ಮುಸ್ಲಿಮರಲ್ಲಿ ಪರಸ್ಪರ ದ್ವೇಷ ಮೂಡಿಸಲಿರುವ ಪ್ರಯತ್ನವಾಗಿದೆ. ಮೋದಿ ಅಧಿಕಾರಕ್ಕೆ ಬಂದರೆ ಮುಸ್ಲಿ ಮರಿಗೆ ದೇಶ ಬಿಟ್ಟು ಹೋಗಬೇಕಾಗಿ ಬರಲಿದೆ ಎಂದು ಈ ಹಿಂದೆ ಶಿವನ್ ಕುಟ್ಟಿ ಹೇಳಿರುವುದನ್ನು ಜನರು ಮರೆತಿಲ್ಲವೆಂದೂ ಅವರು ತಿಳಿಸಿದ್ದಾರೆ.
