ಕುಂಬಳೆ: ಅಪಾಯಭೀತಿಯೊ ಡ್ಡುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮುಚ್ಚುಗಡೆಗೊಳಿಸಿದ್ದ ಕಂಚಿಕಟ್ಟೆ ಸೇತುವೆಯ ಎರಡೂ ಭಾಗದಲ್ಲಿ ಸ್ಥಾಪಿಸಿದ್ದ ಕಾಂಕ್ರೀಟ್ ಗೋಡೆಯನ್ನು ಕೆಡವಲಾಗಿದೆ. ಒಂದೂವರೆ ವರ್ಷದಿಂದ ಸೇತುವೆಗೆ ಅಡ್ಡವಾಗಿ ನಿರ್ಮಿಸಿದ್ದ ಗೋಡೆಯನ್ನು ಕೆಡವುದರೊಂದಿಗೆ ಲಾರಿ ಸಹಿತ ವಿವಿಧ ವಾಹನಗಳು ಸೇತುವೆ ಮೂಲಕ ಸಂಚರಿ ಸತೊಡಗಿವೆ. ಸೇತುವೆ ಅಪಾಯಭೀತಿಯ ಲ್ಲಿದೆಯೆಂದು ನಾಗರಿಕರು ತಿಳಿಸಿದ ಹಿನ್ನೆಲೆಯಲ್ಲಿ ಒಂದೂವರೆ ವರ್ಷ ಹಿಂದೆ ಜಿಲ್ಲಾಧಿಕಾರಿ, ಮೈನರ್ ಇರಿಗೇಶನ್, ಲೋಕೋಪಯೋಗಿ ವಿಭಾಗಗಳ ಅಧಿಕಾರಿಗಳು, ಸೇತುವೆಯನ್ನು ಸಂದರ್ಶಿಸಿದರು. ಯಾವುದೇ ಕ್ಷಣದಲ್ಲಿ ಸೇತುವೆ ಕುಸಿಯಲು ಸಾಧ್ಯತೆ ಇದೆಯೆಂದೂ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿತ್ತು. ಈ ವರದಿಯ ಹಿನ್ನೆಲೆಯಲ್ಲಿ ಸೇತುವೆ ಮೂಲಕ ವಾಹನ ಸಂಚಾರ ತಡೆಯಲು ಜಿಲ್ಲಾಧಿಕಾರಿ ಕುಂಬಳೆ ಪಂಚಾಯತ್‌ಗೆ ನಿರ್ದೇಶಿಸಿ ದ್ದರು. ಪಂಚಾಯತ್ ಸೇತುವೆಯ ಎರಡೂ ಭಾಗಗಳಲ್ಲಿ ವಾಹನಗಳು ಸಂಚರಿಸ ಲಾಗದ ರೀತಿಯಲ್ಲಿ ಕಾಂಕ್ರೀಟ್ ಗೋಡೆ ನಿರ್ಮಿಸಿತು. ಇದೇ ವೇಳ ಒಂದೂವರೆ ವರ್ಷದಿಂದ ಸೇತುವೆ ನಿರ್ಮಿಸಿ ವಾಹನ ಸಂಚಾರ ಪುನರಾರಂಭಿ ಸಬೇಕೆಂದು ಒತ್ತಾಯ ಕೇಳಿಬಂದಿದೆ. ಸೇತುವೆ ನಿರ್ಮಾಣಕ್ಕೆ ಎರಡೂ ಭಾಗದಲ್ಲಿ ಸ್ಥಳದ ಅಗತ್ಯವಿದೆಯೆಂದು ಅಧಿಕಾರಿಗಳು ತಿಳಿಸಿದುದರಿಂದ ನಾಗರಿಕರು ಐದು ಲಕ್ಷ ರೂಪಾಯಿಯಷ್ಟು ಮೊತ್ತ ಸಂಗ್ರಹಿಸಿ ಸೇತುವೆಯ ಒಂದು ಭಾಗದಲ್ಲಿ ಪಂಚಾಯತ್‌ನ ಹೆಸರಲ್ಲಿ ಸ್ಥಳ ನೋಂದಾಯಿಸಿ ನೀಡಿದರು. ಮತ್ತೊಂದು ಭಾಗದಲ್ಲಿರುವ ಸ್ಥಳವನ್ನು ಪಂಚಾಯತ್‌ನ ಹೆಸರಲ್ಲಿ ಕ್ರಯಕ್ಕೆ ಖರೀದಿಸಲು ಪ್ರಯತ್ನ ಆರಂಭಗೊಂ ಡಿದೆ. ಈ ಮಧ್ಯೆ ಸೇತುವೆಗೆ ೨೭ ಕೋಟಿ ರೂಪಾಯಿ ಮಜೂರು ಮಾಡಲಾಗಿದೆಯೆಂದೂ ಹೇಳಲಾಗುತ್ತಿದೆ. ಈ ಮಧ್ಯೆ ಮೊನ್ನೆ ರಾತ್ರಿ ಸೇತುವೆಗೆ ಅಡ್ಡವಾಗಿ ನಿರ್ಮಿಸಿದ ಗೋಡೆಯನ್ನು ಯಾರೋ ಕೆಡವಿರುವುದಾಗಿ ಹೇಳಲಾಗುತ್ತಿದೆ. ಸೇತುವೆ ಮೂಲಕ ಹೆಚ್ಚು ಭಾರದ ವಾಹನಗಳು ಸಂಚರಿಸುವುದು ಅಪಾಯಕಾರಿಯೆಂದು ನಾಗರಿಕರು ಹೇಳುತ್ತಿದ್ದಾರೆ.
