ಮಂಜೇಶ್ವರ: ಹೆಚ್ಚುವರಿ ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪತಿ ಸಹಿತ ೫ ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮಂಗಳೂರು ಜೆಪ್ಪು ನಿವಾಸಿ ತನಿಶಾ (25) ನೀಡಿದ ದೂರಿನಂತೆ ಪಚ್ಲಂಪಾರೆ ನಿವಾಸಿಗಳಾದ ಪತಿ ಅಬ್ದುಲ್ ಮಾಹಿನ್ (30), ಸಂಬಂಧಿಕರಾದ ಅಬ್ದುಲ್ ಮತ್ತೀನ್, ಹಸೀನಾಬಾನು, ಲತೀಫ್, ಉಪ್ಪಳ ಫಿರ್‌ದೋಸ್ ನಗರದ ಅಕ್ಬರ್ ಎಂಬ ವರ ವಿರುದ್ಧ ಕೇಸು ದಾಖಲಿಸಲಾಗಿದೆ. 2024 ಅಗೋಸ್ತ್ 4ರಂದು ಇವರ ವಿವಾಹ ಧಾರ್ಮಿಕ ಪದ್ಧತಿಯ ಪ್ರಕಾರ ನಡೆದಿದೆ. ಮದುವೆಯ ಬಳಿಕ 2025 ಅಗೋಸ್ತ್ 26ರಿಂದ 5 ಮಂದಿ ಕಿರುಕುಳ ನೀಡಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ.
