ಬದಿಯಡ್ಕ: ಸೊಸೆ ಹೃದಯಾಘಾತದಿಂದ ಸಾವಿಗೀಡಾದ ಬೆನ್ನಲ್ಲೇ ಅತ್ತೆಯೂ ಮೃತಪಟ್ಟ ಘಟನೆ ನಡೆದಿದೆ. ದಿ| ಕಣ್ಣನ್ ಬೆಳ್ಚಪ್ಪಾಡರ ಪತ್ನಿಯೂ, ಕುಂಬ್ಡಾಜೆ ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತೀ ಕ್ಷೇತ್ರ ಭಂಡಾರ ಮನೆಯಲ್ಲಿ ವಾಸಿಸುವ ಕಲ್ಯಾಣಿ ಅಮ್ಮ (92) ನಿನ್ನೆ ವೃದ್ದಾಪ್ಯ ಸಹಜ ಅಸೌಖ್ಯದಿಂದ ನಿಧನ ಹೊಂದಿದ್ದಾರೆ. ಇವರ ಪುತ್ರ ಕೃಷ್ಣರ ಪತ್ನಿ ಹರಿಣಾಕ್ಷಿ (47) ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿ ದ್ದರು. ಮರಣಾನಂತರ ಕಾರ್ಯಗಳು ನಡೆಯುತ್ತಿರುವಂ ತೆಯೇ ಅತ್ತೆ ಕಲ್ಯಾಣಿ ಅಮ್ಮ ನಿಧನರಾಗಿದ್ದಾರೆ. ಮೃತ ಕಲ್ಯಾಣಿ ಅಮ್ಮ ಮಕ್ಕಳಾದ ಅಂಬಾಡಿ ಕಾರ್ನವರ್ (ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತೀ ಕ್ಷೇತ್ರ ಆಚಾರ ಸ್ಥಾನಿಕ), ರಾಮನ್, ಸುಂದರ, ಅಶೋಕ, ಕೃಷ್ಣ, ಅಳಿಯ ಸೊಸೆಯಂದಿ ರಾದ ರಾಜೀವ್, ಸುಮತಿ, ಬೇಬಿ, ಕಮಲಾಕ್ಷಿ, ಸಹೋದರ- ಸಹೋದರಿ ಯರಾದ ಕುಟ್ಟಿ, ನಾರಾಯಣನ್, ಕೃಷ್ಣನ್, ಕಾರ್ತ್ಯಾಯಿನಿ, ಕುಞಂಮ್ಮ, ಜಾನಕಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
