ಕುಂಬಳೆ: ಶೇಡಿಕಾವು ನಿವಾಸಿ ಧಾರ್ಮಿಕ ಮುಂದಾಳು ಹಾಗೂ ಹಿರಿಯ ವ್ಯಾಪಾರಿ ಸುಬ್ಬ ಪೂಜಾರಿ [ 96] ಶನಿವಾರ ರಾತ್ರಿ ಸ್ವಗೃಹದಲ್ಲಿ ನಿಧನ ಹೊಂದಿದರು. ಆರಿಕ್ಕಾಡಿ ಶ್ರೀ ಧೂಮಾವತಿ ದೈವಸ್ಥಾನ ಮತ್ತು ಕುಂಬಳೆ ಚಾವಡಿ ಶ್ರೀ ಧೂಮಾವತಿ ದೈವಸ್ಥಾನದ ಮುಖ್ಯಸ್ಥರಾಗಿದ್ದರು. ಅಲ್ಲದೆ ಕುಂಬಳೆ ಶ್ರೀ ಅಯ್ಯಪ್ಪ ಮಂದಿರ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದು, ಗುರು ಸ್ವಾಮಿಯಾಗಿದ್ದರು. ಕುಂಬಳೆ ಮೀನು ಮಾರುಕಟ್ಟೆ ಬಳಿಯಲ್ಲಿ ಹಿರಿಯ ವ್ಯಾಪಾರಿಯಾಗಿದ್ದರು. ಮೃತರು ಮಕ್ಕಳಾದ ಹರಿಶ್ಚಂದ್ರ, ಮಾಲತಿ, ಗಣೇಶ, ಕೋಟಿ, ಚೆನ್ನಯ್ಯ, ರೋಹಿಣಿ, ರೇವತಿ, ಶಶಿ, ಶಿವ, ಅಳಿಯಂದಿರಾದ ಚಿದಾನಂದ, ಕೇಶವ ತಲಪಾಡಿ, ಲಕ್ಷö್ಮಣ, ಕೇಶವ ಮುಂಬೈ, ಸೊಸೆಯಂದಿರಾದ ಚಂದ್ರಾವತಿ, ಸುಶೀಲ, ರೇಖಾ, ಲತಾ, ಸಂಗೀತ, ಸಹೋದರ ಶೀನ ಪೂಜಾರಿ, ಸಹೋದರಿಯರಾದ ಸುಶೀಲ, ಯಮುನ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪತ್ನಿ ಶಾರದಾ, ಪುತ್ರ ಶ್ರೀಧರ ಈ ಹಿಂದೆ ನಿಧನರಾಗಿದ್ದಾರೆ.
