ಕುಂಬಳೆ: ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶುಕ್ರವಾರ ನಡೆದ ಘರ್ಷಣೆಯ ಹಿನ್ನೆಲೆಯಲ್ಲಿ ನಿಲುಗಡೆಗೊಳಿಸಿದ್ದ ಕಲೋತ್ಸವವನ್ನು ಇಂದು ಶಾಂತ ವಾತಾವರಣದಲ್ಲಿ ಪುನರಾರಂಭಿಸಲಾ ಯಿತು. ಶಾಲಾ ಪರಿಸರದಲ್ಲಿ ಬಿಗು ಪೊಲೀಸ್ ಕಾವಲು ಏರ್ಪಡಿಸಲಾಗಿದೆ. ಶಾಲೆಗಿರುವ ಪ್ರವೇಶದ್ವಾರಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಸಮವಸ್ತ್ರ ಹಾಗೂ ಬ್ಯಾಡ್ಜ್ ಧರಿಸಿದ ಮಕ್ಕಳನ್ನು ತಪಾಸಣೆಯ ಬಳಿಕವೇ ಶಾಲಾ ಕಂಪೌಂಡ್‌ನೊಳಗೆ ಪ್ರವೇಶಿಸಲು ಬಿಡಲಾಗುತ್ತಿದೆ. ಕೆಲವು ಮಕ್ಕಳೊಂದಿಗೆ ರಕ್ಷಕರು ತಲುಪಿದ್ದು, ಅವರನ್ನು ತಪಾಸಣೆ ಬಳಿಕ ಕಂಪೌಂ ಡ್‌ನೊಳಗೆ ಕಳುಹಿಸಲಾಯಿತು. ಬಳಿಕ ಮಕ್ಕಳನ್ನು ಶಾಲೆಯಲ್ಲಿ ಬಿಟ್ಟ ಕೂಡಲೇ ಮರಳುವಂತೆ ಪೊಲೀಸರು ನಿರ್ದೇಶ ನೀಡಿದ್ದಾರೆ. ಹೊರಗಿನ ಇತರ ಯಾರನ್ನೂ ಶಾಲೆಯೊಳಗೆ ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲ.
ಕಳೆದ ಶುಕ್ರವಾರ ಶಾಲೆಯಲ್ಲಿ ಕಲೋತ್ಸದಂಗವಾಗಿ ಮೂಕಾಭಿನಯ ಸ್ಪರ್ಧೆಯಲ್ಲಿ ಪ್ಯಾಲೆಸ್ತೀನ್‌ಗೆ ಬೆಂಬಲ ವ್ಯಕ್ತಪಡಿಸಿ ನಡೆಸಿದ ಪ್ರದರ್ಶನದಿಂದ ವಿವಾದ ಸೃಷ್ಟಿಯಾಗಿತ್ತು. ಮೂಕಾಭಿನಯ ಸ್ಪರ್ಧೆಯಲ್ಲಿ ಭಾಗವಹಿಸಿದ ಓರ್ವ ವಿದ್ಯಾರ್ಥಿ ಪ್ಯಾಲೆಸ್ತೀನ್ ಪರವಾಗಿ ದೃಶ್ಯಗಳನ್ನು ಪ್ರದರ್ಶಿಸಿ ನಿಲ್ಲುತ್ತಿದ್ದಂತೆ ಫ್ರೀ ಪ್ಯಾಲೆಸ್ತೀನ್ ಎಂದು ಬರೆಯಲಾದ ಬ್ಯಾನರ್ ಎತ್ತಿ ಹಿಡಿಯಲಾಗಿದೆ. ಅದನ್ನು ಗಮನಿಸಿದ ಅಧ್ಯಾಪಕರು ಕೂಡಲೇ ಪರದೆ ಇಳಿಸುವಂತೆ ನಿರ್ದೇಶಿಸಿದ್ದರು. ಇದುವೇ ವಿವಾದಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಅನಂತರ ಭಾರೀ ಕೋಲಾಹಲವೇ ಸೃಷ್ಟಿಯಾಗಿದ್ದು, ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ ಉಂಟಾದುದರಿಂದ ಪೊಲೀಸರು ತಲುಪಿ ಲಾಠಿ ಬೀಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು. ಕೂಡಲೇ ಕಲೋತ್ಸವದ ಮುಂದಿನ ಸ್ಪರ್ಧೆಗಳು ಹಾಗೂ ಶನಿವಾರ ನಡೆಯಬೇಕಾಗಿದ್ದ ಸ್ಪರ್ಧೆಗಳನ್ನು ಮುಂದೂಡಲಾಯಿತು. ಈ ಮಧ್ಯೆ ನಾಗರಿಕರು ಮಧ್ಯ ಪ್ರವೇಶಿಸಿದರು. ಶಾಲೆಯಲ್ಲಿ ಶಾಂತಿ ವಾತಾವರಣ ಕಾಯ್ದುಕೊಳ್ಳುವ ಅಂಗವಾಗಿ ತುರ್ತು ಪಿಟಿಎ ಸಭೆ ಕರೆಯಲಾಯಿತು. ಸ್ಪರ್ಧೆ ನಡೆಯುತ್ತಿದ್ದಂತೆ ಒಂದು ವಿಭಾಗ ವಿದ್ಯಾರ್ಥಿಗಳು ಸಭೆಗೆ ನುಗ್ಗಿದ್ದು, ಇದರಿಂದ ಪಿಟಿಎ ಸಭೆಯೂ ಮೊಟಕುಗೊಂಡಿತ್ತು. ಇದೇ ವೇಳೆ ಮುಕಾಭಿನಯ ಸ್ಪರ್ಧೆ ವೇಳೆ ಅಧ್ಯಾಪ ಕರು ಕೈಗೊಂಡ ಕ್ರಮಗಳು ಸರಿಯಾದು ದಾಗಿ ದೆಯೆಂದು ಜಿಲ್ಲಾ ಶಿಕ್ಷಣ ಉಪನಿರ್ದೇಶಕರು ಅಭಿಪ್ರಾಯ ಪಟ್ಟಿದ್ದಾರೆ. ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಗೆ ಸಲ್ಲಿಸಿದ ವರದಿಯಲ್ಲಿ ಕಲೋತ್ಸವ ವೇಳೆ ವಿದ್ಯಾರ್ಥಿಗಳ ಮಧ್ಯೆ ಘೋಷಣೆಗಳು ಕೇಳಿಬಂದುದರಿಂದ ಕಲೋತ್ಸವ ನಿಲ್ಲಿಸಲು ಕಾರಣವೇನೆಂದು ಡಿಡಿಇ ತಿಳಿಸಿದ್ದಾರೆ. ಕಲೋತ್ಸವದ ನಿಬಂಧನೆ ಗಳಿಗೆ ವಿರುದ್ಧವಾಗಿ ಮೂಕಾಭಿನಯ ಸ್ಪರ್ಧೆ ನಡೆದಿರುವು ದಾಗಿ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅದನ್ನು ತಡೆಯಲಾಗಿದೆ. ಅಧ್ಯಾಪಕರ ಭಾಗದಿಂದ ಮನಃಪೂರ್ವಕ ಯಾವುದೇ ಕ್ರಮ ಉಂಟಾಗಿಲ್ಲ ವೆಂದೂ ವರದಿಯಲ್ಲಿ ತಿಳಿಸಲಾಗಿದೆ.