ಸಿಪಿಎಂ ನೇತಾರೆ ಯುವ ನ್ಯಾಯವಾದಿಯ ಸಾವು: ಆತ್ಮಹತ್ಯಾ ಪ್ರೇರಣ ಆರೋಪದಂತೆ ನ್ಯಾಯವಾದಿ ಸೆರೆ

ಕಾಸರಗೋಡು: ಯುವ ನ್ಯಾಯವಾದಿಯೂ, ಸಿಪಿಎಂ ಕುಂಬಳೆ ಲೋಕಲ್ ಕಮಿಟಿ ಸದಸ್ಯೆಯಾದ ಬತ್ತೇರಿಯ ರಂಜಿತ (30) ತನ್ನ ನ್ಯಾಯವಾದಿ ಕಚೇರಿಯಲ್ಲಿ  ನೇಣು ಬಿಗಿದು ಸಾವಿಗೀಡಾದ ಬೆನ್ನಲ್ಲೇ ತಲೆಮರೆಸಿಕೊಂಡ ನ್ಯಾಯವಾದಿ ಯನ್ನು ಬಂಧಿಸಲಾಯಿತು. ಪತ್ತನಂತಿಟ್ಟ ಪುರಮುಟ್ಟಂ ಮುಂಡಲಂ ಶಾಂತ ಭವನ್‌ನ ಅನಿಲ್ ಕುಮಾರ್ (45)ನನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪಿ. ಜಿಜೀಶ್‌ರ ನಿರ್ದೇಶ ಪ್ರಕಾರ ಎಸ್‌ಐ ಕೆ. ಶ್ರೀಜೇಶ್‌ರನ್ನೊಳಗೊಂಡ ತಂಡ ತಿರುವನಂತಪುರದಿಂದ ಸೆರೆ ಹಿಡಿದಿದೆ. ಆತ್ಮಹತ್ಯೆ ಪ್ರೇರಣೆ ಆರೋಪದಂತೆ ಈತನನ್ನು ಬಂಧಿಸಲಾಗಿದೆ. ನಿನ್ನೆ ರಾತ್ರಿ ಕಾಸರಗೋಡಿಗೆ ತಲುಪಿಸಿದ ಆರೋಪಿಯನ್ನು ಪೊಲೀಸರು ಸಮಗ್ರವಾಗಿ ತನಿಖೆಗೊಳ ಪಡಿಸುತ್ತಿದ್ದಾರೆ. ರಂಜಿತರ ಸಾವಿಗೆ ಸಂಬಂಧಿಸಿ ತನಿಖೆ ತೀವ್ರಗೊಳಿ ಸಬೇಕೆಂದು ಒತ್ತಾಯಿಸಿ ಸಿಪಿಎಂ ಕುಂಬಳೆ ಏರಿಯಾ ಕಮಿಟಿ ಹಾಗೂ ಲೋಕಲ್ ಕಮಿಟಿ ರಂಗಕ್ಕಿಳಿದ ಬೆನ್ನಲ್ಲೇ ನ್ಯಾಯವಾದಿ ಅನಿಲ್ ಕುಮಾರ್‌ನನ್ನು ಬಂಧಿಸಲಾಗಿದೆ. ಸೆ. 30ರಂದು ಸಂಜೆ ರಂಜಿತ ಕುಂಬಳೆಯಲ್ಲಿರುವ ತನ್ನ ಕಚೇರಿ ಕೊಠಡಿಯೊಳಗೆ ಫ್ಯಾನ್‌ಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

RELATED NEWS

You cannot copy contents of this page