ಉಪ್ಪಳ: ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಮಂಗಲ್ಪಾಡಿ ಮಂಜೇಶ್ವರ ಪಂಚಾಯತ್ ನೇತೃತ್ವ ಸಮಿತಿ ಬಾಲವೇದಿ ಸೃಜನೋತ್ಸವ ಬೇಕೂರು ಸುಭಾಸ್ ನಗರ ಯುವಶಕ್ತಿ ಫ್ರೆಂಡ್ಸ್ ಸರ್ಕಲ್ ಲೈಬ್ರೆರಿಯಲ್ಲಿ ನಡೆಯಿತು. ಕೇರಳ ಸ್ಟೇಟ್ ಲೈಬ್ರೆರಿ ಕೌನ್ಸಿಲ್ ಸದಸ್ಯ ದಾಸಪ್ಪ ಶೆಟ್ಟಿ ಮಾಸ್ಟರ್ ಉದ್ಘಾಟಿಸಿದರು. ಸಮಿತಿ ಸಂಚಾಲಕ ರವೀಂದ್ರ ಶೆಟ್ಟಿ ಬೊಳ್ಳಾರು ಅಧ್ಯಕ್ಷತೆ ವಹಿಸಿದರು.
ಭಾಗ್ಯ ಕರುಣಾಕರ ಬರ್ಲಾಯಾ ಸೃಜನೋತ್ಸವದ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯ ಕಾರಿ ಸದಸ್ಯೆ ವನಿತಾ ಆರ್ ಶೆಟ್ಟಿ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಪಂಚಾಯತ್ ಮಟ್ಟದಲ್ಲಿ ಲೈಬ್ರೆರಿಯ ಮಕ್ಕಳಿಗೆ ವಿವಿಧ ಸ್ಪರ್ಧೆ ಗಳನ್ನು ಏರ್ಪಡಿಸಲಾಗಿತ್ತು. ತೀರ್ಪು ಗಾರರಾಗಿ ಸುಜಾತ.ಡಿ. ಬಂಗೇರ, ಉಪನ್ಯಾಸಕ ಚೆನ್ನಯ್ಯ ಪೂಜಾರಿ, ವೀಣಾ ಡಿ ಸಾಲಿಯಾನ್, ನೇಹಾ ಬೇಕೂರು ಭಾಗವಹಿಸಿದರು. ಯುವಶಕ್ತಿ ಫ್ರೆಂಡ್ಸ್ ಸರ್ಕಲ್ ಲೈಬ್ರೆರಿ ಅಧ್ಯಕ್ಷ ಲಕ್ಷ್ಮಣ ಪೂಜಾರಿ ಸ್ವಾಗತಿಸಿ, ಸದಸ್ಯ ಉಮೇಶ್ ಶೆಟ್ಟಿ ಬೊಳ್ಳಾರು ವಂದಿಸಿದರು.