ಕುಂಬಳೆ: ಅಳಿಯನೊಂದಿಗಿರುವ ದ್ವೇಷದಿಂದ ಪತ್ನಿಯ ತಾಯಿಗೆ ಕ್ವಾರ್ಟರ್ಸ್‌ಗೆ ನುಗ್ಗಿ ಆಕ್ರಮಣಗೈದು ಮನೆಯ ಉಪಕರ ಣಗಳನ್ನು ನಾಶಗೊಳಿಸಿರುವುದಾಗಿ ದೂರಲಾಗಿದೆ. ಕೇಸು ದಾಖಲಿಸಿದ ಕುಂಬಳೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಕೊಯಿಪ್ಪಾಡಿಯ ಸೈಫುದ್ದೀನ್ (32), ಶಾಂತಿಪಳ್ಳ ಲಕ್ಷಂವೀಡು ನಿವಾಸಿ ಮೊಹಮ್ಮದ್ ಶಫೀಕ್ (23) ಎಂಬಿವರನ್ನು ಕುಂಬಳೆ ಎಸ್‌ಐ ಪ್ರದೀಪ್ ಕುಮಾರ್ ಬಂಧಿಸಿದ್ದಾರೆ. ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಪೆರ್ವಾಡಿನಲ್ಲಿರುವ ಒಂದು ಕ್ವಾರ್ಟರ್ಸ್‌ನಲ್ಲಿ ವಾಸ ಮಾಡುತ್ತಿದ್ದ ಮಹಿಳೆ ಆಕ್ರಮಣಕ್ಕೆ ತುತ್ತಾಗಿದ್ದಾರೆ.
