ದಾಖಲೆಗಳನ್ನು ಮುರಿದು ಮುಂದೆ ಸಾಗಿದ ಚಿನ್ನದ ಬೆಲೆ

ಕಾಸರಗೋಡು: ಜಾಗತಿಕವಾಗಿ ಆರ್ಥಿಕ, ರಾಜಕೀಯ ಸಂದಿಗ್ಧತೆ ಮುಂದುವರಿಯುತ್ತಿರುವಾಗ ಚಿನ್ನದ ಬೆಲೆ ದಾಖಲೆಗಳನ್ನು ಮುರಿದು ಮುಂದುವರಿಯುತ್ತಿದೆ. ಇಂದು 1 ಪವನ್ ಚಿನ್ನದ ದರ 91.040 ರೂ.ಗಳಾಗಿದೆ. ನಿನ್ನೆಗಿಂತ 720 ರೂ.ಗಳ ಹೆಚ್ಚಳವಾಗಿದೆ. ಇಂದು 1 ಗ್ರಾಂ ಚಿನ್ನದ ಬೆಲೆ 11,380 ರೂ. ಆಗಿದೆ. ಇದೇ ಸ್ಥಿತಿ ಮುಂದುವರಿದರೆ ಇನ್ನು ಕೆಲವೇ ದಿನಗಳಲ್ಲಿ ಚಿನ್ನದ ಬೆಲೆ ಪವನ್‌ಗೆ 1 ಲಕ್ಷವನ್ನು ದಾಟಲಿದೆಯೇ ಎಂಬ ಆತಂಕ ಮೂಡಿಸಿದೆ.

ಸುರಕ್ಷತೆಗಾಗಿ ಕೇಂದ್ರ ಬ್ಯಾಂಕ್‌ಗಳು ಹಾಗೂ ಜಾಗತಿಕ ಫಂಡ್‌ಗಳು ಭಾರೀ ಪ್ರಮಾಣದಲ್ಲಿ ಚಿನ್ನ ಸಂಗ್ರಹಿಸುತ್ತಿರುವುದರೊಂದಿಗೆ ಅಂತಾರಾಜ್ಯ ಮಾರುಕಟ್ಟೆಯಲ್ಲಿ  ಚಿನ್ನದ ದರ ಹೆಚ್ಚುತ್ತಿದೆ. ಇದು ದೇಶದಲ್ಲೂ ಪ್ರತಿಫಲಿಸುತ್ತಿದೆ. 

You cannot copy contents of this page