1 ಲೋಡ್ ತಂಬಾಕು ಉತ್ಪನ್ನ ವಶ: ಇಬ್ಬರ ಸೆರೆ

ಕಾಸರಗೋಡು: ಚಂದೇರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಒಂದು ಲೋಡ್ ತಂಬಾಕು ಉತ್ಪನ್ನಗಳ ಸಹಿತ ಉಳಿಯತ್ತಡ್ಕ ನಿವಾಸಿಗಳಾದ ಇಬ್ಬರು ಸೆರೆಗೀಡಾಗಿದ್ದಾರೆ. ಉಳಿಯತ್ತಡ್ಕ ನ್ಯಾಷನಲ್‌ನಗರ ಬಿಸ್ಮಿಲ್ಲಾ ಮಹಲ್‌ನ ಎ.ವಿ. ಶಮೀರ್ (40), ಎ.ಎಂ. ಯೂಸಫ್ (68) ಎಂಬಿವರನ್ನು ಚಂದೇರ ಪೊಲೀಸ್ ಇನ್ಸ್‌ಪೆಕ್ಟರ್ ಕೆ. ಪ್ರಶಾಂತ್‌ರ ನೇತೃತ್ವದಲ್ಲಿ ಬಂಧಿಸಲಾಗಿದೆ.

ಇಂದು ಮುಂಜಾನೆ ೨ ಗಂಟೆ ವೇಳೆ ಪಯ್ಯನ್ನೂರು ಭಾಗಕ್ಕೆ ತೆರಳುತ್ತಿದ್ದ ಲಾರಿಯನ್ನು ಮುಂಡ್ಯಕ್ಕಾವ್ ಕ್ಷೇತ್ರ ಸಮೀಪ ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ತಂಬಾಕು ಉತ್ಪನ್ನಗಳು ಪತ್ತೆಯಾಗಿದೆ. ತಂಬಾಕು ಉತ್ಪನ್ನಗಳನ್ನು ಕಾಸರಗೋಡಿನಿಂದ ಲಾರಿಯಲ್ಲಿ ತುಂಬಿಸಿದ್ದು  ಕಲ್ಲಿಕೋಟೆಗೆ ಕೊಂಡೊಯ್ಯುತ್ತಿರುವುದಾಗಿ ಬಂಧಿತರು ತಿಳಿಸಿದ್ದಾರೆನ್ನಲಾಗಿದೆ.

You cannot copy contents of this page