ಕಾಸರಗೋಡು: ಬಾಲಕಿಯೊಂದಿಗೆ ಪ್ರೇಮದ ನಾಟಕವಾಡಿ ಆಕೆಗೆ ಲೈಂಗಿಕ ಕಿರುಕುಳ ನೀಡಿ ಅದರ ಫೋಟೋ ತೆಗೆದು ಮತ್ತು ವೀಡಿಯೋ ಚಿತ್ರೀಕರಣ ನಡೆಸಿ ಅದನ್ನು ತೋರಿಸಿ ಹಣ ಪಡೆಯಲೆತ್ನಿಸಿದ ಆರೋಪದಂತೆ ಯುವಕ ಮತ್ತು ಆತನಿಗೆ ಸಹಾಯವೊದಗಿಸಿದ ಸ್ನೇಹಿತನ ವಿರುದ್ಧ ಮೇಲ್ಪರಂಬ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ ಅವರಿಬ್ಬರನ್ನು ಬಂಧಿಸಿದ್ದಾರೆ.
ಮೂಲತಃ ಕೋಳಿಯಡ್ಕ ನಿವಾಸಿ ಹಾಗೂ ಈಗ ವಿದ್ಯಾನಗರ ಬಿಸಿ ರೋಡ್ನ ನಿಹಾಲ್ ಅಪಾರ್ಟ್ಮೆಂ ಟ್ನಲ್ಲಿ ವಾಸಿಸುತ್ತಿರುವ ಕೆ.ಎಂ. ಮೊಹಮ್ಮದ್ ಅಫ್ರೀದಿ (23) ಮತ್ತು ಆತನ ಸ್ನೇಹಿತ ಕಾಸರಗೋಡು ಅಣಂಗೂರು ಸುಲ್ತಾನ್ನಗರ ಬೆದಿರಾ ಹೌಸ್ನ ಬಿ.ಎಂ. ಅಬ್ದುಲ್ ಖಾದರ್ (28) ಬಂಧಿತ ಆರೋಪಿಗಳಾಗಿದ್ದಾರೆ.
ಮೇಲ್ಪರಂಬ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎ. ಸಂತೋಷ್ ಕುಮಾರ್ ನೇತೃತ್ವದಲ್ಲಿ ಎಸ್ಐ ಎ.ಎನ್. ಸುರೇಶ್ ಕುಮಾರ್, ಎಎಸ್ಐ ಸಲೀಲ್, ಸಿಪಿಒಗಳಾದ ಮಿಥೇಶ್ ಮಣ್ಣಚ್ಚ, ಪ್ರಮೋದ್, ಸಜಿತ್, ಪ್ರಶೋಬ್, ಉಣ್ಣಿಕೃಷ್ಣನ್ ಮತ್ತು ಪ್ರದೀಶ್ ಎಂಬವರನ್ನೊಳ ಗೊಂಡ ಪೊಲೀಸರ ತಂಡ ಬೇಕಲ ಡಿವೈಎಸ್ಪಿ ವಿ.ವಿ. ಮನೋಜ್ ನೀಡಿದ ನಿರ್ದೇಶ ಪ್ರಕಾರ ಆರೋಪಿಗಳನ್ನು ಬಂಧಿಸಿದೆ. ಈ ಪ್ರಕರಣದ ಒಂದನೇ ಆರೋಪಿ ಅಫ್ರೀದಿ 2019ರಲ್ಲಿ ಸೋಶ್ಯಲ್ ಮೀಡಿಯಾ ಮೂಲಕ ಬಾಲಕಿ ಯುವಕನನ್ನು ಪರಿಚಯ ಗೊಂಡಿದ್ದನು. ಆ ಪರಿಚಯದ ಹೆಸರಲ್ಲಿ ಬಾಲಕಿ ಯನ್ನು ಆತ ಹಲವೆಡೆಗಳಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದ ಮಾತ್ರವಲ್ಲದೆ ಅದರ ವೀಡಿಯೋ ಚಿತ್ರೀಕರಣ ನಡೆಸಿ ಫೋಟೋಗಳನ್ನು ತೆಗೆದಿದ್ದನು. ನಂತರ ಅದರ ದೃಶ್ಯಗ ಳನ್ನು ತೋರಿಸಿ ಆ ಬಾಲಕಿಯಿಂದ ಮೊದಲು 22 ಗ್ರಾಂ ಚಿನ್ನ ಕೇಳಿ ಪಡೆದುಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಅದಾದ ಬಳಿಕ ಹಣ ನೀಡುವಂತೆ ಆತ ಬಾಲಕಿಯನ್ನು ನಿರಂತರವಾಗಿ ಒತ್ತಾಯಿಸತೊ ಡಗಿದನು. ಆತನ ಸ್ನೇಹಿತ ಅಬ್ದುಲ್ ಖಾದರ್ ಬಾಲಕಿಯ ತಂದೆಯನ್ನು ಕರೆದು ಒಂದನೇ ಆರೋಪಿ ಅಫ್ರೀದಿಯ ಫೋನ್ನಿಂದ ತನಗೆ ವೀಡಿಯೋ ದೃಶ್ಯಗಳು ಲಭಿಸಿದೆ ಯೆಂದು ಅದನ್ನು ಹೊರಬಿಡದಿರಲು 5೦,೦೦೦ ರೂ. ನೀಡುವಂತೆ ಒತ್ತಾಯಿಸಿದ್ದನೆಂದೂ ಪೊಲೀಸರು ತಿಳಿಸಿದ್ದಾರೆ. ಆ ಬಗ್ಗೆ ಬಾಲಕಿಯ ತಂದೆ ಬಳಿಕ ಮೇಲ್ಪರಂಬ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ನೀಡಿದ ನಿರ್ದೇಶ ಪ್ರಕಾರ ತಾನು ಹಣ ನೀಡಲು ಸಿದ್ಧವೆಂದು ಬಾಲಕಿಯ ತಂದೆ ತಿಳಿಸಿ ಉಪಾಯದಿಂದ ಆರೋಪಿಗಳಿಬ್ಬರನ್ನು ಕರೆದಿದ್ದು ಅದರಂತೆ ಹಣ ಪಡೆಯಲು ಆರೋಪಿಗಳು ಬಂದಾಗ ಆ ಪರಿಸರದಲ್ಲಿ ಹೊಂಚು ಹಾಕಿ ನಿಂತಿದ್ದ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.