ಕಲ್ಲಿಕೋಟೆ: ಇಲ್ಲಿಗೆ ಸಮೀಪದ ನಾದಾಪುರದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿಯನ್ನು ಹಲವು ಬಾರಿ ಲೈಂಗಿಕ ದೌರ್ಜನ್ಯಗೈದ ಪ್ರಕರಣದಲ್ಲಿ ಬಸ್ ನೌಕರ ಸಹಿತ ೫ ಮಂದಿ ಸೆರೆಯಾಗಿದ್ದಾರೆ. ಏರಮಲ ಪೂತಲತ್ತ್ ತಾಳೇಕುಣಿ ಆದಿತ್ಯನ್ (19), ಕೋಟಪ್ಪಳಿ ಸಾಯುಜ್ (19) ಆಯಂಚೇರಿ ನಿವಾಸಿ ಸಾಯುಜ್ (20), ತಯ್ಯಿಲ್ ನಿವಾಸಿ ಅನುನಂದ್ (18), ವಲ್ಯೋಟ್ ಪಾರಮ್ಮೇಲ್ ಆದಿತ್ಯನ್ (19) ಸೆರೆಯಾದವರು. ಬಾಲಕಿ ನೀಡಿದ ಹೇಳಿಕೆಯಂತೆ ವಿಭಿನ್ನ ಸಮ ಯಗಳಲ್ಲಿ ದೌರ್ಜನ್ಯ ನಡೆಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ೫ ಕೇಸು ದಾಖಲಿಸಲಾಗಿದೆ.
ಹೆತ್ತವರು ನೀಡಿದ ದೂರಿನಂತೆ ಬಾಲಕಿಯ ಹೇಳಿಕೆ ಪ್ರಕಾರ ಪೋಕ್ಸೋ ಪ್ರಕರಣದಂತೆ ಕೇಸು ದಾಖಲಿಸಲಾಗಿದೆ. ಪ್ರೇರೇಪಿಸಿ, ಬೆದರಿಸಿ ಬಾಲಕಿಯನ್ನು ದೌರ್ಜನ್ಯಗೈಯ್ಯಲಾಗಿದೆಯೆನ್ನಲಾಗಿದೆ. ನಿನ್ನೆ ಹೆತ್ತವರು ಈ ಬಗ್ಗೆ ದೂರು ನೀಡಿದ್ದಾರೆ. ಶಾಲೆಯಲ್ಲಿ ನಡೆಸಿದ ಕೌನ್ಸಿಲಿಂಗ್‌ನಲ್ಲಿ ಬಾಲಕಿ ದೌರ್ಜನ್ಯ ಬಗ್ಗೆ ಹೇಳಿಕೆ ನೀಡಿದ್ದಾಳೆ. ಬಳಿಕ ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಾಲಕಿಯೊಂದಿಗೆ ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕ ಬೆಳೆಸಿ ದೌರ್ಜನ್ಯಗೈಯ್ಯಲಾಗಿದೆ.