ಮಾಯಿಪ್ಪಾಡಿ: ಶಿರಿಬಾಗಿಲು ತೈವಳಪ್ಪ್‌ನಲ್ಲಿ ನಬಿ ದಿನಾಚರಣೆ ಯಂಗವಾಗಿ ಸ್ಥಾಪಿಸಿದ್ದ ಹಸಿರು ಪತಾಕೆಯನ್ನು ಕಿತ್ತು ತೆಗೆದು ಬೆಂಕಿ ಹಚ್ಚಿ ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ. ತೈವಳಪ್ಪ್ ನಿವಾಸಿ ಅಬ್ದುಲ್ಲ ನೀಡಿದ ದೂರಿನಂತೆ ಶಿರಿಬಾಗಿಲಿನ ನವೀನ್ ಕುಮಾರ್ ವಿರುದ್ಧ ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿದ್ದಾರೆ.
ಸೆಪ್ಟಂಬರ್ 21ರಂದು ತೈಪಳಪ್ಪ್‌ನಲ್ಲಿ ನಬಿ ದಿನಾ ಚರಣೆಯಂಗವಾಗಿ ಸ್ಥಾಪಿಸಿದ್ದ ಹಸಿರು ಪತಾಕೆಯನ್ನು ಸ್ಥಳೀಯವಾಗಿ ಕಲಹ ಸೃಷ್ಟಿಸಬೇ ಕೆಂಬ ಉದ್ದೇಶದೊಂದಿಗೆ ನಾಶ ಪಡಿಸಿರುವುದಾಗಿಯೂ, ದೂರು ದಾರನನ್ನು ಹಾಗೂ ಜೊತೆಗಿದ್ದವರನ್ನು ಬೆದರಿಸಿರುವುದಾಗಿಯೂ ಪೊಲೀಸರು ದಾಖಲಿಸಿದ ಕೇಸಿನಲ್ಲಿ ತಿಳಿಸಲಾಗಿದೆ.