ಸೀತಾಂಗೋಳಿ: ಇಲ್ಲಿನ ಕಿನ್‌ಫ್ರಾ ಪಾರ್ಕ್ ಸಮೀಪ ನಿನ್ನೆ ಮಧ್ಯಾಹ್ನ ಸಂಭವಿಸಿದ ವಾಹನ ಅಪಘಾತದಲ್ಲಿ ಕೆಎಸ್‌ಇಬಿ ಲೈನ್ ಮ್ಯಾನ್ ಗಂಭೀರ ಗಾಯಗೊಂ ಡಿದ್ದಾರೆ. ಸೀತಾಂಗೋಳಿ ಸೆಕ್ಷನ್‌ನ ಲೈನ್‌ಮ್ಯಾನ್ ಆಗಿರುವ ವಯ ನಾಡು ನಿವಾಸಿ ವಿನೋದ್ (46) ಎಂಬವರು ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ವಿನೋದ್ ಚಲಾಯಿಸುತ್ತಿದ್ದ ಬೈಕ್ ಹಾಗೂ ಎದುರಿನಿಂದ ಬಂದ ಬುಲ್ಲೆಟ್ ಬೈಕ್ ಢಿಕ್ಕಿ ಹೊಡೆದು ಅಪಘಾತ ಉಂಟಾಗಿದೆ.
