ಕಾಸರಗೋಡು: ರಾಜ್ಯದ ರೈಲ್ವೇ ನಿಲ್ದಾಣಗಳ ಹೋಟೆಲ್‌ಗಳಲ್ಲಿ ರೈಲ್ವೇ ಪೊಲೀಸರ ನೇತೃತ್ವದಲ್ಲಿ ಮಿಂಚಿನ ತಪಾಸಣೆ ನಡೆಸಲಾಯಿತು. ‘ಆಪರೇಶನ್ ಪೊದಿಚ್ಚೋರ್’ ಯೋಜನೆಯಂಗವಾಗಿ ಕ್ಯಾಟ್ರಿಂಗ್ ಸ್ಟಾಲ್‌ಗಳಲ್ಲೂ ಕೆಎಸ್‌ಆರ್‌ಟಿಸಿ ಬಳಿಯ ಹೋಟೆಲ್‌ಗಳಲ್ಲೂ ತಪಾಸಣೆ ನಡೆಸಲಾಯಿತು. ಕಾಸರಗೋಡು ರೈಲ್ವೇ ನಿಲ್ದಾಣದ ಪ್ಲಾಟ್ ಫಾರ್ಮ್‌ನಲ್ಲಿ ಕಾರ್ಯಾಚರಿಸುವ ಹೋಟೆಲ್‌ಗಳಲ್ಲೂ, ತಾಯಲಂಗಾಡಿಯಲ್ಲಿ ಕಾರ್ಯಾಚರಿ ಸುವ ವಂದೇ ಭಾರತ್ ಬೇಸ್ ಕಿಚನ್‌ನಲ್ಲಿ ಕೂಡಾ ಪರಿಶೀಲನೆ ನಡೆಸಲಾಯಿತು. ಆದರೆ ಹಳಸಿದ ಆಹಾರಗಳನ್ನು ಇಲ್ಲಿಂದ ಪತ್ತೆಹಚ್ಚಲಾ ಗಲಿಲ್ಲ. ರೈಲ್ವೇ ಸ್ಟೇಶನ್ ಎಸ್‌ಎಚ್‌ಒ ರೆಜಿ ಕುಮಾರ್ ನೇತೃತ್ವ ನೀಡಿದರು.
