ರಾಹುಲ್ ಮಾಕ್ಕೂಟ್ ನ್ಯಾಯಾಂಗ ಬಂಧನದಲ್ಲಿ: ಯೂತ್ ಕಾಂಗ್ರೆಸ್‌ನಿಂದ ಸೆಕ್ರೆಟರಿಯೇಟ್ ಮಾರ್ಚ್
ತಿರುವನಂತಪುರ: ಯೂತ್ ಕಾಂಗ್ರೆಸ್ ನೇತೃತ್ವದಲ್ಲಿ ಕಳೆದ ತಿಂಗಳು ಸೆಕ್ರೆಟರಿಯೇಟ್ ಮಾರ್ಚ್ ನಡೆಸಿದುದಕ್ಕೆ ಸಂಬಂಧಿಸಿ ದಾಖಲಿಸಲಾದ ಪ್ರಕರಣದಂತೆ ನಿನ್ನೆ ಪೊಲೀಸರು ಬಂಧಿಸಿದ ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ರಾಹುಲ್ ಮಾಕ್ಕೂಟ್‌ನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ರಾಹುಲ್‌ರ ಬಂಧನವನ್ನು ಪ್ರತಿಭಟಿಸಿ ಕಾಂಗ್ರೆಸ್‌ನ ತಿರುವನಂತಪುರ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು ಸೆಕ್ರೆಟರಿಯೇಟ್ ಮಾರ್ಚ್ ನಡೆಸಲಾಯಿತು. ಸಂಜೆ ೬ ಗಂಟೆಗೆ ಪೊಲೀಸ್ ಠಾಣೆಗೂ ಪ್ರತಿಭಟನಾ ಮಾರ್ಚ್ ನಡೆಸುವ ತೀರ್ಮಾನವನ್ನು ಕಾಂಗ್ರೆಸ್ ಕೈಗೊಂಡಿದೆ.