ಮುಳ್ಳೇರಿಯ: ಆಲ್‌ಕೆಮಿಸ್ಟ್‌ಗಳು ಲೋಹವನ್ನು ಚಿನ್ನವನ್ನಾಗಿ ಮಾಡುವವ ರಾಗಿದ್ದರೆ, ಚಿನ್ನವನ್ನು ತಾಮ್ರವನ್ನಾಗಿ ಬದಲಿಸುವವರಾಗಿದ್ದಾರೆ ಕಮ್ಯೂನಿಸ್ಟರೆಂದು, ಶಬರಿಮಲೆಯ ಶಿಲ್ಪದ ಚಿನ್ನದ ಕವಚವನ್ನು ತಾಮ್ರವಾಗಿ ಬದಲಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಿಗೆ ರಸಾಯನಶಾಸ್ತ್ರದಲ್ಲಿ ನೋಬೆಲ್ ಬಹುಮಾನಕ್ಕೆ ಅರ್ಹರಾಗಿದ್ದಾರೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಕಾರಡ್ಕ ಪಂಚಾಯತ್ ಬಿಜೆಪಿ ಸಮಿತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ನರೇಂದ್ರ ಮೋದಿ ಸರಕಾರದ ಜನಕ್ಷೇಮ ಯೋಜನೆಗಳ ಪ್ರಚಾರದೊಂದಿಗೆ, ಪಿಣರಾಯಿ ವಿಜಯನ್‌ರ ಭ್ರಷ್ಟಾಚಾರ ಆಡಳಿತವನ್ನು, ದೇವಸ್ವಂ ಬೋರ್ಡ್ ಕ್ಷೇತ್ರಗಳ ದರೋಡೆಯನ್ನು ಜನರ ಮುಂದಿಡಲು ಅಶ್ವಿನಿ ಕಾರ್ಯಕರ್ತರಲ್ಲಿ ಆಗ್ರಹಿಸಿದರು. ಕಾರಡ್ಕ ಪಂಚಾಯತ್ ಸಮಿತಿ ಅಧ್ಯಕ್ಷ ಕೆ. ವಸಂತ ಅಧ್ಯಕ್ಷತೆ ವಹಿಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು, ರಾಜ್ಯ ಕೌನ್ಸಿಲ್ ಸದಸ್ಯರಾದ ಶಿವಕೃಷ್ಣ ಭಟ್, ಹರೀಶ್ ನಾರಂಪಾಡಿ, ಜಿಲ್ಲಾ ಉಪಾಧ್ಯಕ್ಷೆ ಎಂ. ಜನನಿ, ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ., ಪ್ರಧಾನ ಕಾರ್ಯ ದರ್ಶಿ ರವೀಂದ್ರ ರೈ ಗೋಸಾಡ, ಪಂಚಾ ಯತ್ ಸಮಿತಿ ಪ್ರಧಾನ ಕಾರ್ಯದರ್ಶಿ ರತ್ನಾಕರ ಎಂ. ಮಾತನಾಡಿದರು.
