ಕಾಸರಗೋಡು: ಮುಂಬೈಯಲ್ಲಿ ವಾಸಿಸುತ್ತಿರುವ ಮೂಲತಃ ಬೇಕಲ ನಿವಾಸಿ ಬಿ.ಕೆ. ಕೃಪಾಲಿನಿ (76) ನಿಧನ ಹೊಂದಿದರು. ನೆದರ್‌ಲ್ಯಾಂಡ್‌ನ ಆಮ್‌ಸ್ಟರ್ ಡಾಮ್‌ನಲ್ಲಿ ನಿಧನ ಸಂಭವಿಸಿದೆ. ನೇಶನಲ್ ಮಾರಿಟೈಮ್ ಅಕಾಡೆಮಿ ಎಂಬ ಶಿಪ್ಪಿಂಗ್ ಕೋಚಿಂಗ್ ಸೆಂಟರ್‌ನ ಮಾಲಕನಾಗಿದ್ದಾರೆ. ಮುಂಬೈ ನೋರ್ತ್ ಕಾಂಗ್ರೆಸ್ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ, ಎಐಸಿಸಿ ಮಾಜಿ ಸದಸ್ಯನಾಗಿದ್ದರು. ಮೃತರು ಪತ್ನಿ ವಿನೋದಿನಿ, ಮಕ್ಕಳಾದ ವಿಖಿಲ್, ಡಾ| ಕವಿತ, ಡಾ| ನಿಖಿತಾ ಪ್ರಪುಲ್, ಸೊಸೆ ಗ್ರೀಷ್ಮ, ಸಹೋದರರಾದ ನ್ಯಾಯವಾದಿ ಬಿ.ಕೆ. ಅಶೋಕ್, ಬಿ.ಕೆ. ಮುರಳಿ, ಸಹೋದರಿ ಯರಾದ ಅರುಣ ಕಾಸರಗೋಡು, ಶ್ರೀವಲ್ಲಿ ಬೇಕಲ, ರಾಜೇಶ್ವರಿ ಬೇಕಲ, ಪ್ರಸನ್ನ ಬೇಕಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
