ಪೊಲೀಸ್ ಹಲ್ಲೆ ಆರೋಪ: ಸಂಸದ ಶಾಫಿ ಪರಂಬಿಲ್‌ರಿಗೆ ತುರ್ತು ಶಸ್ತ್ರಚಿಕಿತ್ಸೆ

ಕಲ್ಲಿಕೋಟೆ: ಪೇರಾಂಬ್ರದಲ್ಲಿ ಯುಡಿಎಫ್- ಸಿಪಿಎಂ ಪ್ರತಿಭಟನೆ ಮೆರವಣಿಗೆ ಮಧ್ಯೆ ಪೊಲೀಸರು ನಡೆಸಿದ ಲಾಠಿ ಚಾರ್ಜ್‌ನಲ್ಲಿ ಗಾಯಗೊಂಡ ಸಂಸದ ಶಾಫಿ ಪರಂಬಿಲ್‌ರನ್ನು ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಶಾಸಕ ಟಿ. ಸಿದ್ದಿಕ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಶಾಫಿಯ ಮೂಗಿನ ಎಲುಬಿಗೆ ಗಾಯವುಂಟಾಗಿದೆ ಎಂದು,  ಶಸ್ತ್ರಚಿಕಿತ್ಸೆ ನಡೆಸಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ನಡೆಸಿದ ತಪಾಸಣೆಯಲ್ಲಿ ಮೂಗಿನ ಎಲುಬು ಮುರಿದ ಬಗ್ಗೆ ತಿಳಿದು ಬಂದಿತ್ತು. ಐದು ದಿನದ ವಿಶ್ರಾಂತಿ ಡಾಕ್ಟರ್‌ಗಳು ನಿರ್ದೇಶಿಸಿದ್ದಾರೆ.

ಪೇರಾಂಬ್ರ ಸಿಕೆಜಿ ಕಾಲೇಜ್ ಯೂನಿಯನ್ ಚುನಾವಣೆಗೆ ಸಂಬಂಧಿಸಿ ನಡೆದ ಅಕ್ರಮಗಳ ಹಿನ್ನೆಲೆಯಲ್ಲಿ ಪೊಲೀಸ್ ಹಲ್ಲೆಯಿಂದ ಶಾಫಿ ಪರಂಬಿಲ್ ಸಹಿತ ೧೦ ಮಂದಿ ಯುಡಿಎಫ್ ಕಾರ್ಯಕರ್ತರು ಗಾಯಗೊಂಡಿದ್ದರು. ಇದೇ ವೇಳೆ ಶಾಫಿಗೆ ಗಾಯಗೊಂಡಿರುವುದು ಲಾಟಿ ಚಾರ್ಜ್‌ನಿಂದ ಅಲ್ಲವೆಂದು ಕಲ್ಲಿಕೋಟೆ ರೂರಲ್ ಎಸ್‌ಪಿ ತಿಳಿಸಿದ್ದಾರೆ. ಪ್ರತಿಭಟನಾ ಮೆರವಣಿಗೆ ವಿರುದ್ಧ ಪೊಲೀಸರು ಲಾಠಿ ಚಾರ್ಜ್ ನಡೆಸಿಲ್ಲವೆಂದು, ಹಾಗಿದ್ದರೆ ವೀಡಿಯೋ ತೋರಿಸಲು ಎಸ್‌ಪಿ ಆಗ್ರಹಿಸಿದ್ದಾರೆ. ಡಿವೈಎಸ್‌ಪಿ ಸಹಿತ ಪೊಲೀಸರಿಗೂ ಗಾಯವುಂಟಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಯುಡಿಎಫ್ ಪ್ರತಿಭಟನಾ ಸಂಗಮ ನಡೆಸಲಿದ್ದು, ಕೆ.ಸಿ. ವೇಣುಗೋಪಾಲ್ ಉದ್ಘಾಟಿಸುವರು.

You cannot copy contents of this page