ಅಸೌಖ್ಯ: ಮುಸ್ಲಿಂ ಲೀಗ್ ಕಾರ್ಯಕರ್ತ ನಿಧನ

ಮುಳಿಯಾರು: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಮುಳಿಯಾರಿನ ಮುಸ್ಲಿಂಲೀಗ್ ಕಾರ್ಯಕರ್ತ ಬೋವಿಕ್ಕಾನ ಬಾಲನಡ್ಕ ನಿವಾಸಿ ಜಾಫರ್ ಸೈಫ್ (47) ನಿಧನ ಹೊಂದಿದರು. ಕರುಳು ಸಂಬಂಧವಾದ ಅಸೌಖ್ಯದಿಂದ ಚಿಕಿತ್ಸೆಯಲ್ಲಿದ್ದರು.  ದಿ| ಅಬ್ದುಲ್ಲ-ಮರಿಯಾ ದಂಪತಿ ಪುತ್ರನಾಗಿದ್ದಾರೆ. ಮೃತರು ತಾಯಿ, ಪತ್ನಿ ಮಿಸ್ರಿಯಾ, ಮಕ್ಕಳಾದ ಸಾನಿಯಾ, ಸಾನಿಫ್, ಸಹೋದರರಾದ ಅಶ್ರಫ್, ನಾಸರ್, ಸಹೋದರಿ ಸಕೀನಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

You cannot copy contents of this page