ಮಂಗಳೂರು: ನಿಷೇಧಿತ ಸಂಘಟನೆಯಾದ ಪೋಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಪ್ರಚಾರಪಡಿಸಿದ ವ್ಯಕ್ತಿಯನ್ನು ಮಂಗಳೂರು ನೋರ್ತ್ ಪೊಲೀಸರು ಬಂಧಿಸಿದ್ದಾರೆ. ಕಸಬಾ ರಾಮಕುಂಜ ನಿವಾಸಿ ಬೀಜತ್ತಳಿ ಹೌಸ್ನ ಸಯ್ಯಿದ್ ಇಬ್ರಾಹಿಂ ತಂಙಳ್ (55)ನನ್ನು ಸೆರೆ ಹಿಡಿಯಲಾಗಿದೆ. ಉರ್ವಾಸ್ಟೋರ್ ಸಮೀಪದಿಂದ ಈತನನ್ನು ಸೆರೆ ಹಿಡಿಯಲಾಗಿದ್ದು, ಮೊಬೈಲ್ ಫೋನ್ ವಶಪಡಿಸಿದ್ದಾರೆ. ಆರೋಪಿ ವಿರುದ್ಧ ಯುಎಪಿಎ ಪ್ರಕಾರ ಕೇಸು ದಾಖಲಿಸಲಾಗಿದೆ.
ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅಕ್ಟೋಬರ್ ೨೪ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ತೀರ್ಪು ನೀಡಲಾಗಿದೆ. 2020ರಲ್ಲಿ ಭಾರತ ಸರಕಾರ ಪಿಎಫ್‌ಐಯನ್ನು ಕಾನೂನುಬಾಹಿರ ಸಂಘಟನೆಯಾಗಿ ಘೋಷಿಸಿ ನಿಷೇಧಿಸಿತ್ತು.







