ಕಾಸರಗೋಡು: ಅಡ್ಕತ್ತಬೈಲು ತ್ಸುನಾಮಿ ಕಾಲನಿಯ ವಿಜೇಶ್ರ ಪತ್ನಿ ಬಬಿಷ(34) ನಿಧನಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಪೆರುಂಬಳದ ಸಹೋದರಿಯ ಮನೆಯಲ್ಲಿದ್ದ ಬಬಿಷಾರನ್ನು ರೋಗ ಉಲ್ಭಣಗೊಂಡ ಹಿನ್ನೆಲೆಯಲ್ಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಧ್ಯೆ ಮರಣ ಸಂಭವಿಸಿದೆ. ಮೃತರು ಪತಿ, ಮಕ್ಕಳಾದ ರಿಯಾಂಸಿ, ಅನ್ವಿಕ, ತಾಯಿ ವಿನುತ, ಸಹೋದರಿಯರಾದ ವಂದನ, ವಿನುಷ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
