ಬಂದ್ಯೋಡು: ಕೆಪಿಸಿಸಿ ಕಾರ್ಯಾಧ್ಯಕ್ಷ, ಸಂಸದ ಶಾಫಿ ಪರಂಬಿಲ್ ಹಾಗೂ ಯುಡಿಎಫ್ ನೇತಾರರ ವಿರುದ್ಧ ಪೇರಾಂಬ್ರದಲ್ಲಿ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಹಾಗೂ ಹಲ್ಲೆ ಪ್ರತಿಭಟಿಸಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಂದ್ಯೋಡುವಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಾಬು ಬಂದ್ಯೋಡು ಅಧ್ಯಕ್ಷತೆ ವಹಿಸಿದ್ದು, ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಫಾರೂಕ್ ಶಿರಿಯ ಉದ್ಘಾಟಿಸಿದರು.
ಇರ್ಷಾದ್, ಅಶ್ರಫ್ ಮುಟ್ಟಂ, ಮೋಹನನ್ ಮೇಸ್ತ್ರಿ, ಇಬ್ರಾಹಿಂ, ಕುಂಇÁಲಿ ಇಚ್ಲಂಗೋಡು, ನಾಗೇಶ್, ರಾಜೇಶ್ ನಾಯ್ಕ್, ಬರ್ನಾರ್ಡ್ ಡಿ ಅಲ್ಶೇಡಾ, ಅಜೀಝ್, ತುಳಸಿ, ಶಿಹಾಬ್ ಎಂ.ಕೆ, ಹನೀಫ್ ವರ್ಕಾಡಿ, ಯೂಸುಫ್ ಕುನ್ನಿಲ್, ಹನೀಫ್ ಪೆರಿಂಗಡಿ ಉಪಸ್ಥಿತರಿದ್ದರು. ಓ.ಎಂ.ರಶೀದ್ ಸ್ವಾಗತಿಸಿ, ಬಶೀರ್ ಹೇರೂರು ವಂದಿಸಿದರು.
