ಮೊಬೈಲ್ ಫೋನ್ ಅಂಗಡಿಯಿಂದ ಹಾಡಹಗಲೇ ಕಳವು: ಆರೋಪಿ ಸೆರೆ

ಕಾಸರಗೋಡು: ಹಾಡಹಗಲೇ ಮೊಬೈಲ್ ಫೋನ್ ಅಂಗಡಿಯಿಂದ 12 ಸಾವಿರ ರೂಪಾಯಿ ಮೌಲ್ಯದ ಫೋನ್ ಕಳವುಗೈದ ಆರೋಪದಂತೆ ಯುವಕನನ್ನು ಬಂಧಿಸಲಾಗಿದೆ. ಚಟ್ಟಂಚಾಲ್ ಬೆಂಡಿಚ್ಚಾಲ್ ಕನಿಯಾಂಕುಡ್ ನಿವಾಸಿ ಸಿ.ಎಂ ಅಬ್ದುಲ್ ಖಾದರ್(39) ಎಂಬಾತನನ್ನು ಮೇಲ್ಪರಂಬ ಪೊಲೀಸ್ ಇನ್‌ಸ್ಪೆಕ್ಟರ್ ಎ. ಸಂತೋಷ್ ಕುಮಾರ್ ನಿರ್ದೇಶ ಪ್ರಕಾರ ಎಸ್.ಐ. ಎ.ಎನ್.ಸುರೇಶ್ ಕುಮಾರ್ ಬಂಧಿಸಿದ್ದಾರೆ. ಚಟ್ಟಂಚಾಲ್ ಪೇಟೆಯಲ್ಲಿ ಕಾರ್ಯಾಚರಿಸುವ ಸೆಲೆಕ್ಷನ್ ವರ್ಲ್ಡ್ ಎಂಬ ಅಂಗಡಿಯಿಂದ ಬುಧವಾರ ಮೊಬೈಲ್ ಫೋನ್ ಕಳವಿಗೀಡಾಗಿತ್ತು. ಅಂಗಡಿ  ನೌಕರನಾದ ಕನಿಯಾಂಕುಂಡ್‌ನ ಅಬ್ದುಲ್ ಖಾದರ್‌ರ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

You cannot copy contents of this page