ಕಾಸರಗೋಡು: ಎಡರಂಗ ಆಡಳಿತದ ಅವಧಿಯಲ್ಲಿ ನಡೆದ ಶಬರಿಮಲೆ ಚಿನ್ನ ಲೂಟಿ ಹಗರಣವನ್ನು ಸಿಬಿಐ ತನಿಖೆ ಮಾಡಬೇಕು ಎಂದು ಬಿಜೆಪಿ ರಾಜ್ಯ ಸೆಲ್ ಕೋ-ಆರ್ಡಿನೇಟರ್ ಪಿ.ಕೆ. ಸಜೀವನ್ ಆಗ್ರಹಿಸಿದ್ದಾರೆ. ಒಬಿಸಿ ಮೋರ್ಛಾದ ಜಿಲ್ಲಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು ಅಪರಾಧಿಗಳನ್ನು ರಕ್ಷಿಸುವ ನೀತಿಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅನುಸರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಒಬಿಸಿ ಮೋರ್ಛಾ ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್ ಅಧ್ಯಕ್ಷತೆ ವಹಿಸಿದರು. ಒಬಿಸಿ ಮೋರ್ಛಾ ರಾಜ್ಯ ಕಾರ್ಯದರ್ಶಿ ಎಂ.ಕೆ. ವಿನೋದ್, ಒಬಿಸಿ ಮೋರ್ಛಾದ ಚಟುವಟಿಕೆಗಳನ್ನು ಮಂಡಿಸಿದರು. ಒಬಿಸಿ ಮೋರ್ಛಾ ರಾಜ್ಯ ಉಪಾಧ್ಯಕ್ಷ ವಿಜಯ ಕಣ್ಣೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್ ಮಾತನಾಡಿದರು. ಒಬಿಸಿ ಮೋರ್ಛಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಣ್ಣಿಕೃಷ್ಣನ್ ಕಲ್ಯಾಣ್ ರೋಡ್ ಸ್ಪಾಗತಿಸಿ, ಪ್ರಧಾನ ಕಾರ್ಯದರ್ಶಿ ದಯಾನಂದ ಕುಲಾಲ್ ಕುಂಬಳೆ ವಂದಿಸಿದರು.
