ಕೊಚ್ಚಿ: ಪತ್ನಿಯ ನಗ್ನ ಚಿತ್ರವನ್ನು ವಾಟ್ಸಪ್ ಪ್ರೊಫೈಲ್ ಡಿಪಿಯಾಗಿ ಮಾಡಿ ಪ್ರಚಾರಪಡಿಸಿದ ಪ್ರಕರಣದಲ್ಲಿ ಯುವಕ ಸೆರೆಯಾಗಿದ್ದಾನೆ. ತೃಕ್ಕಾಕರ ನಿವಾಸಿ 28ರ ಹರೆಯದ ವ್ಯಕ್ತಿಯನ್ನು ಪೆರುಂಬಾವೂರು ಪೊಲೀಸರು ಬಂಧಿಸಿದ್ದಾರೆ. ಪತ್ನಿಯೊಂದಿಗಿನ ದ್ವೇಷವೇ ಘಟನೆಗೆ ಕಾರಣವೆನ್ನ ಲಾಗಿದೆ. ಪತ್ನಿಯಿಂದ ದೂರವಾಗಿದ್ದ ಯುವಕ ಪತ್ನಿಗೆ ಇನ್ನೊಬ್ಬನೊಂದಿಗೆ ಸಂಪರ್ಕವಿದೆಯೆಂದು ಆತನೊಂದಿಗೆ ವೀಡಿಯೋ ಕಾಲ್ ಮಾಡಿದಾಗ ಅಡಗಿ ನಿಂತು ಚಿತ್ರ ತೆಗೆದಿರುವು ದಾಗಿಯೂ ಯುವಕ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಇನ್ಸ್ಪೆಕ್ಟರ್ ಟಿ.ಎಂ. ಸೂಫಿಯವರ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.
