ಕುಂಬಳೆ: ಖಾಸಗಿ ಹಣಕಾಸು ಸಂಸ್ಥೆಯಲ್ಲಿ ನಕಲಿ ಚಿನ್ನ ಅಡವಿರಿಸಿ ಸಾಲ ಪಡೆದು ವಂಚಿಸಿದ ಬಗ್ಗೆ ದೂರಲಾಗಿದೆ. ಮುತ್ತೂಟ್ ಫಿನಾನ್ಸ್ ಕುಂಬಳೆ ಶಾಖೆ ಮೆನೇಜರ್ ನೀಲೇಶ್ವರ ಪೇರಾಲ್ ಪೂವಲಂಕೈಯ ಶ್ರೀಕಲ ಶಿಜು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿ ಸಿಕೊಂಡಿದ್ದಾರೆ. ಮುತ್ತೂಟ್ ಫಿನಾನ್ಸ್ನ ಕುಂಬಳೆ ಶಾಖೆಯಲ್ಲಿ ನಕಲಿ ಚಿನ್ನ ಅಡವಿರಿಸಿ 2.3 ಲಕ್ಷ ರೂಪಾಯಿ ಲಪಟಾಯಿಸಿದ ಆರೋಪದಂತೆ ಕಾಸರಗೋಡು ತೆರುವತ್ನ ಕೆ. ಮುಹಮ್ಮದ್ ಸಲೀಂ (26) ವಿರುದ್ಧ ಕೇಸು ದಾಖಲಿಸಲಾಗಿದೆ. ಸೆ. 29ರಂದು ಈತ 31ಗ್ರಾಂ ನಕಲಿ ಚಿನ್ನ ಅಡವಿರಿಸಿ ಹಣ ಪಡೆದು ಕೊಂಡಿರುವುದಾಗಿ ಶ್ರೀಕಲ ಶಿಜು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.
