ಎಣ್ಮಕಜೆ ಬಳಿ ಜುಗಾರಿ ದಂಧೆ: 6 ಮಂದಿ ಸೆರೆ; 1,03,820 ರೂ. ವಶ

ಪೆರ್ಲ: ಎಣ್ಮಕಜೆ ಕುಂಞಿಪ್ಪಾರ ಎಂಬಲ್ಲಿನ  ಜುಗಾರಿ ಕೇಂದ್ರಕ್ಕೆ ಪೊಲೀಸರು ದಾಳಿ ನಡೆಸಿ ಆರು ಮಂದಿಯನ್ನು ಬಂಧಿಸಿದ್ದಾರೆ. ಆಟಕ್ಕೆ ಬಳಸಿದ 1,03,820 ರೂಪಾಯಿಗಳನ್ನು ವಶಪಡಿಸಲಾಗಿದೆ. ಅಡ್ಯನಡ್ಕ ಚವರ್ಕಾಡ್ ನಿವಾಸಿ ಕೆ. ಗಿರೀಶ್ (36), ಸುರತ್ಕಲ್ ಕಾನ ಗಣೇಶ್ ಬೀಡಿ ಫ್ಯಾಕ್ಟರಿ ಸಮೀಪದ ಮುಹಮ್ಮದ್ ಹನೀಫ (48), ದಕ್ಷಿಣ ಕನ್ನಡ ಮಡಿಗುಡ್ಡೆ ಬಲ್ಲಾಳ್‌ಬಾಗ್‌ನ ರಾಜ (53), ವಿಟ್ಲದ ಪ್ರಶಾಂತ (34), ಎಣ್ಮಕಜೆ ಪಳ್ಳಕ್ಕಾನದ ಅಬ್ದುಲ್ಲ (55), ಮಂಗಳೂರು ಕುಂಜುಮುಗರುವಿನ ರಾಧಾಕೃಷ್ಣನ್ ನಾಯರ್ (56) ಎಂಬಿವರನ್ನು ಬದಿಯಡ್ಕ ಎಸ್‌ಐ ಟಿ. ಅಖಿಲ್, ಎಎಸ್‌ಐ ಪ್ರಸಾದ್ ಎಂಬಿವರು ಬಂಧಿಸಿದ್ದಾರೆ.

ನಿನ್ನೆ ರಾತ್ರಿ 9.15ರ ವೇಳೆ ಕುಂಞಿಪ್ಪಾರದ ಜುಗಾರಿ ಕೇಂದ್ರಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ. ಇಲ್ಲಿಗೆ ಕರ್ನಾಟಕದಿಂದ ಸಹಿತ ಜನರು ತಲುಪಿ ಜುಗಾರಿ ದಂಧೆ ನಡೆಯುತ್ತಿರುವ ಬಗ್ಗೆ ಗುಪ್ತ ಮಾಹಿತಿ ಲಭಿಸಿತ್ತು. ಇಲ್ಲಿಗೆ ಎಸ್‌ಐ ಹಾಗೂ ಎಎಸ್‌ಐ ನೇತೃತ್ವದ ಪೊಲೀಸರು  ದಿಢೀರ್ ದಾಳಿ ನಡೆಸಿ ಜುಗಾರಿನಿರತರನ್ನು ಬಂಧಿಸಿದ್ದಾರೆ.

You cannot copy contents of this page