ಕಾಸರಗೋಡು: ಮಂಗಳೂರಿಗೆ ಕಾಸರಗೋಡು ಡಿಪ್ಪೋದಿಂದ ಹೊಸತಾಗಿ ಆರಂಭಿಸಿದ ಕೆಎಸ್‌ಆರ್ ಟಿಸಿ ಫಾಸ್ಟ್ ಪ್ಯಾಸೆಂಜರ್ ಬಸ್‌ಗೆ ಶಾಸಕ ಎನ್.ಎ. ನೆಲ್ಲಿಕುನ್ನು ಚಾಲನೆ ನೀಡಿದರು.
ಕಾಸರಗೋಡು ಡಿಪೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಟಿಒ ಪ್ರಿಯೇಶ್ ಕುಮಾರ್, ಕಂಟ್ರೋಲಿಂಗ್ ಆಫೀಸರ್ ಎಂ.ಕೆ. ಸಜಿತ್, ಮೋಹನನ್ ಪಾಡಿ, ನಂದ ಕುಮಾರ್ ಭಾಗವಹಿಸಿದರು. ಕುಂಬಳೆ, ಬಂದ್ಯೋಡು, ಕೈಕಂಬ, ಉಪ್ಪಳ, ಹೊಸಂಗಡಿ, ಮಂಜೇಶ್ವರ, ತಲಪಾಡಿ, ತೊಕ್ಕೊಟ್ಟು ಎಂಬೆಡೆಗಳಲ್ಲಿ ಈ ಬಸ್‌ಗೆ ನಿಲುಗಡೆ ಇರುತ್ತದೆ. ಎರಡು ಬಸ್‌ಗಳು ಈ ರೀತಿ ಸಂಚಾರ ಆರಂಭಿಸಿವೆ.