ಬಂದ್ಯೋಡು: ನಾಪತ್ತೆಯಾದ ವ್ಯಕ್ತಿಯೋರ್ವರಿಗಾಗಿ ಹುಡುಕಾಡುತ್ತಿದ್ದ ಮಧ್ಯೆ ಅವರು ಪತ್ತೆಯಾಗಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ. ಇಚ್ಲಂಗೋಡು ಮೇಲಿನಮನೆ ನಿವಾಸಿ ವಿಠಲ ರೈ (75) ನಾಪತ್ತೆಯಾದ ಬಗ್ಗೆ ಕುಂಬಳೆ ಠಾಣೆಗೆ ದೂರು ನೀಡಲಾಗಿತ್ತು. ಆದಿತ್ಯವಾರ ಸಂಜೆ ಮನೆಯಿಂದ ತೆರಳಿದ ಇವರು ಬಳಿಕ ಹಿಂತಿರುಗಿರಲಿಲ್ಲ. ಇದರಿಂದಾಗಿ ಎರಡು ದಿನಗಳಿಂದ ವಿವಿಧ ಕಡೆ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಕುಟುಂಬ ಸಂಕಟಪಡುತ್ತಿದ್ದ ಮಧ್ಯೆ ಇಂದು ಬೆಳಿಗ್ಗೆ ಮನೆ ಪರಿಸರದ ಇನ್ನೊಂದು ಮನೆಯ ಸಿಟೌಟ್ನಲ್ಲಿ ಇವರು ಕುಳಿತಿರುವುದು ಪತ್ತೆಯಾಗಿದೆ. ಬಳಿಕ ಆ ಮನೆಯವರು ಇವರನ್ನು ಗುರುತು ಹಿಡಿದು ವಿಠಲ ರೈಯವರ ಮನೆಗೆ ತಿಳಿಸಿದ್ದಾರೆ. ಅವರು ತಲುಪಿ ವಿಠಲ ರೈಯವರನ್ನು ಮನೆಗೆ ಕರೆದುಕೊಂಡು ಹೋಗಿದ್ದು ಪ್ರಕರಣ ಸುಖಾಂತ್ಯ ಕಂಡ ಹಿನ್ನೆಲೆಯಲ್ಲಿ ಸ್ಥಳೀಯರು ಸಂತಸಗೊಂಡರು.
