ಬದಿಯಡ್ಕ: ಆಲ್ ಕೇರಳ ಫೋ ಟೋಗ್ರಾರ್ಸ್ ಅಸೋಸಿ ಯೇಶನ್ ಕುಂಬಳೆ ವಲಯ ಸಮ್ಮೇಳನ ಸೂರಂಬೈಲು ಕೋಓಪರೇಟಿವ್ ಬ್ಯಾಂಕ್ನ ಸಮನ್ವಯ ಸಭಾಂಗಣದ `ಚಿದಾನಂದ ನಗರಿ’ಯಲ್ಲಿ ನಿನ್ನೆ ಜರಗಿತು. ಎಕೆಪಿಎ ಜಿಲ್ಲಾ ಕಾರ್ಯ ದರ್ಶಿ ಹರೀಶ್ ಪಾಲಕುನ್ನು ಉದ್ಘಾಟಿ ಸಿದರು.
ಎಕೆಪಿಎ ಕುಂಬಳೆ ವಲಯ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಸುಗುಣನ್ ಇರಿಯ, ಕಾರ್ಯದರ್ಶಿ ರಾಜೆಂದ್ರನ್, ಕೋಶಾದಿsಕಾರಿ ಪ್ರಜಿತ್ ಕಾಞಂ ಗಾಡು, ಉಪಾಧ್ಯಕ್ಷ ವೇಣು ವಿ.ವಿ., ಜಿಲ್ಲಾ ವೆಲ್ಫೇರ್ ಸಮಿತಿ ಸಂಚಾಲಕ ವಿಜಯನ್, ಜಿಲ್ಲಾಸಮಿತಿ ಸದಸ್ಯ ನಿತ್ಯಪ್ರಸಾದ್ ಕುಂಬಳೆ ಶುಭಕೋರಿ ದರು. ಈ ಸಂದರ್ಭದಲ್ಲಿ ಛಾಯಾಗ್ರಹಣ ವೃತ್ತಿಯೊಂದಿಗೆ ಹೈನುಗಾರಿಕೆ ಯಲ್ಲಿ ಸಾಧನೆಗೈದ ಶ್ರೀಕೃಷ್ಣ ಭಟ್ ಪೆರ್ಲ ಹಾಗೂ ಕೃಷಿಯಲ್ಲಿ ಸಾಧನೆಗೈದ ಹರೀಶ್ ಆಳ್ವರನ್ನು ಸನ್ಮಾನಿಸಲಾ ಯಿತು. ಕುಂಬಳೆ ವಲಯ ಉಸ್ತುವಾರಿ ಸುÃರ್ ಕಾಞಂಗಾಡು ಅವರನ್ನು ಅಭಿನಂದಿಸಲಾಯಿತು. ಕಾರ್ಯದರ್ಶಿ ಸುರೇಶ್ ಆಚಾರ್ಯ ಸ್ವಾಗತಿಸಿ, ಬದಿ ಯಡ್ಕ ಘಟಕ ಕಾರ್ಯದರ್ಶಿ ನಾರಾ ಯಣ ವಿ. ಪ್ರಾರ್ಥನೆ ಹಾಡಿದರು.
ಪ್ರತಿನಿದಿs ಸಮ್ಮೇಳನವನ್ನು ಜಿಲ್ಲಾ ಅಧ್ಯಕ್ಷ ಸುಗುಣನ್ ಇರಿಯ ಉದ್ಘಾಟಿಸಿದರು. ವಲಯ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ರಾಜೆಂದ್ರನ್ ಜಿಲ್ಲಾ ವರದಿ, ಕಾರ್ಯ ದರ್ಶಿ ಸುರೇಶ್ ಆಚಾರ್ಯ ವಲಯ ವರದಿ ಹಾಗೂ ಕೋಶಾದಿಕಾರಿ ವೇಣುಗೋಪಾಲ ನೀರ್ಚಾಲು ಲೆಕ್ಕಪತ್ರ ಮಂಡಿಸಿದರು. ವಲಯ ಪಿಆರ್ಒ ಶ್ಯಾಮಪ್ರಸಾದ ಸರಳಿ ಸ್ವಾಗತಿಸಿ, ಉದಯಕುಮಾರ್ ಎಂ. ವಂದಿಸಿದರು. ಇದೇ ಸಂದರ್ಭದಲ್ಲಿ ನೂತನ ಪದಾದಿsಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ಕರೀಮ್, ಕಾರ್ಯದರ್ಶಿಯಾಗಿ ವೇಣುಗೋಪಾಲ ನೀರ್ಚಾಲು, ಕೋಶಾದಿsಕಾರಿಯಾಗಿ ನವೀನ್ ಕುಂ ಬಳೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಪ್ರದೀಪ್, ಜತೆಕಾರ್ಯದರ್ಶಿಯಾಗಿ ಗಣೇಶ್, ಪಿ.ಆರ್.ಒ. ಆಗಿ ಸಂದೇಶ್ ಐಲ ಹಾಗೂ ಜಿಲ್ಲಾ ಸಮಿತಿ ಸದಸ್ಯರಾಗಿ ಸುರೇಶ್ ಆಚಾರ್ಯ, ಅಪ್ಪಣ್ಣ ಸೀತಾಂಗೋಳಿ, ಸುನಿಲ್ ಕುಮಾರ್ರನ್ನು ಆರಿಸಲಾಯಿತು. ಜೆÆತೆ ಕಾರ್ಯದರ್ಶಿ ನವೀನ್ ಕುಂಬಳೆ ಸಂಸ್ಮರಣೆ ನಡೆಸಿದರು.







