ಪಾಲಕ್ಕಾಡ್: ಕಲ್ಲಿಕೋಡ್ ನೆರೆಮನೆ ನಿವಾಸಿಗಳಾದ ಇಬ್ಬರು ಯುವಕರು ಗುಂಡು ತಗಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಮುನ್ನೆಕಾರ್ ಮರುದಂಕಾಡ್ ನಿವಾಸಿ ಬಿನು, ನಿತಿನ್ ಎಂಬಿವರು ಮೃತಪಟ್ಟರು. ನಿನ್ನೆ ಸಂಜೆ 3 ಗಂಟೆಗೆ ಘಟನೆ ನಡೆದಿದೆ. ಮರುದಂಕಾಡ್ ಸರಕಾರಿ ಶಾಲೆ ಸಮೀಪದ ರಸ್ತೆಯಲ್ಲಿ ಇವರಿಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಿನುವಿನ ಮೃತದೇಹದ ಸಮೀಪದಲ್ಲಿ ನಿತಿನ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಲ್ಲಿಂದ ನಾಡಕೋವಿಯೊಂದನ್ನು ಪತ್ತೆಹಚ್ಚಲಾಗಿದೆ. ನಿತಿನ್‌ನನ್ನು ಕೊಲೆಗೈದ ಬಳಿಕ ಬಿನು ಸ್ವಯಂ ಗುಂಡು ಹಾರಿಸಿ ಮೃತಪಟ್ಟಿರಬೇಕೆಂದು ಸೂಚನೆ ಲಭಿಸಿದೆ. ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ.







