ಅಂಗಡಿಮೊಗರು: ಅಂಗಡಿ ಮೊಗರು ಸೇವಾ ಸಹಕಾರಿ ಬ್ಯಾಂಕಿನ 2024-25 ವರ್ಷದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಬ್ಯಾಂಕ್ ಬ್ಯಾಂಕ್ ಪರಿಸರ ದಲ್ಲಿ ಜರಗಿತು. ಬ್ಯಾಂಕ್ ನ ಅಧ್ಯಕ್ಷ ರಾಮ್ ಭಟ್ ಅಧ್ಯಕ್ಷತೆ ವಹಿಸಿ, ಬ್ಯಾಂಕ್ ಅಭಿವೃದ್ಧಿ ಮತ್ತು ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು. ಸದಸ್ಯರಾದ ಸುಬ್ಬಣ್ಣ ಆಳ್ವ, ಬಶೀರ್ ಕೊಟ್ಟುಡಲ್, ಪಾಲಾಕ್ಷ ರೈ, ಪ್ರೇಮ, ಸಂಜೀವ ರೈ,ಪದ್ಮನಾಭ ಭಂಡಾರಿ, ಕೊರಗಪ್ಪ, ಅಬ್ದುಲ್ಲ ಕಂಡತ್ತಿಲ್ ಚರ್ಚೆಯಲ್ಲಿ ಭಾಗವಹಿಸಿದರು. ಬ್ಯಾಂಕ್ ನಿರ್ದೇಶಕ ಪಿ.ಬಿ. ಮಹಮ್ಮದ್ ಸ್ವಾಗತಿಸಿ, ಕಾರ್ಯದರ್ಶಿ ವಿಠಲ್ ರೈ ವರದಿ ಮಂಡಿಸಿ ದರು, ನಿರ್ದೇಶಕಿ ಭಾರತಿ ಜೆ ಶೆಟ್ಟಿ ವಂದಿಸಿದರು.







