ಸ್ಥಳೀಯಾಡಳಿತ ಚುನಾವಣೆ: ಜಿಲ್ಲೆಯ ಗ್ರಾಮ ಪಂಚಾಯತ್‌ಗಳ ವಾರ್ಡ್ ಮೀಸಲಾತಿ ಪ್ರಕ್ರಿಯೆ ಪೂರ್ಣ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಗೆ ಸಂಬAಧಿಸಿ ಗ್ರಾಮ ಪಂಚಾಯತ್ಗಳ ಮೀಸಲಾತಿ ವಾರ್ಡ್ ವಿಭಜನೆ ಪ್ರಕ್ರಿಯೆ ನಿನ್ನೆ ಪೂರ್ಣಗೊಂಡಿದೆ. ಜಿಲ್ಲಾಧಿಕಾರಿ ಕೆ. ಇಂಭಶೇಖರ್ರ ನೇತೃತ್ವದಲ್ಲಿ ಇದನ್ನು ಪೂರ್ತೀಕರಿಸ ಲಾಯಿತು. ನಿನ್ನೆ ಕಾಸರಗೋಡು, ನೀಲೇಶ್ವರ ಮತ್ತು ಪರಪ್ಪ ಬ್ಲೋಕ್ಗಳ ಗ್ರಾಮ ಪಂಚಾಯತ್ ಮೀಸಲಾತಿ ವಾರ್ಡ್ಗಳನ್ನು ಡ್ರಾ ಮೂಲಕ ಪೂರ್ಣಗೊಳಿಸಲಾಯಿತು. ಸ್ಥಳೀಯಾ ಡಳಿತ ಇಲಾಖೆಯ ಜಂಟಿ ನಿರ್ದೇಶಕ ಆರ್. ಶೈನಿ, ಉಪ ನಿರ್ದೇಶಕ ಕೆ.ವಿ. ಹರಿದಾಸ್, ಇಲೆಕ್ಟ್ರಲ್ ಉಪ ಜಿಲ್ಲಾ ಧಿಕಾರಿ ಎ.ಎನ್. ಗೋಪಕುಮಾರ್, ಡಿ.ಎಲ್.ಆರ್.ಜಿ ಗಳಾದ ಎನ್.ಕೆ. ಸುಬೈರ್, ಸಿ. ವಿ.ಜೀವನ್ ಮತ್ತು ಕೆ.ವಿ. ಬಿಜು ಎಂಬವರು ಈ ಪ್ರಕ್ರಿಯೆಗಳನ್ನು ನಿಯಂತ್ರಿಸಿದರು. ಪಂಚಾಯತ್ಗಳು ಮತ್ತು ಮೀಸಲಾತಿ ವಾರ್ಡ್ಗಳು ಇಂತಿವೆ.
ಕುAಬಳೆ ಗ್ರಾಮ ಪಂಚಾಯತ್ ಕೋಟೆಕಾರು (ವಾರ್ಡ್ 23) ಪರಿಶಿಷ್ಟ ಜಾತಿ ಮೀಸಲಾತಿ ವಾರ್ಡ್ನ್ನಾಗಿ ಆರಿಸಲಾಗಿದೆ. ಉಳಿದಂತೆ ಕುಂಬೋಳ್ (1), ಆರಿಕ್ಕಾಡಿ (2), ಉಜಾರು (5), ಉಳುವಾರು (6), ನಾರಾಯಣಮಂಗಲ (12), ಕೆ.ಕೆ.ಪುರ (14), ಮೊಗ್ರಾಲ್ (15), ಕೊಪ್ಪಳ (16), ಕುಂಬಳೆ ರೈಲ್ವೇ ಸ್ಟೇಷನ್ (18), ನಡುಪಳ್ಳಂ (19), ಶಾಂತಿಪಳ್ಳ (21) ಮತ್ತು ಮಾಟ್ಟುಂಗುಳಿ (22) ಎಂಬೀ ವಾರ್ಡ್ಗಳನ್ನು ಮಹಿಳಾ ಮೀಸಲಾತಿ ವಾರ್ಡ್ಗಳನ್ನಾಗಿ ಆರಿಸಲಾಗಿದೆ.
ಬದಿಯಡ್ಕ: ಚರ್ಲಡ್ಕ (16) ಪರಿಶಿಷ್ಟ ಜಾತಿ ಮಹಿಳಾ ಮೀಸಲಾತಿ ಮತ್ತು ಕಿಳಿಂಗಾರು (2) ಪರಿಶಿಷ್ಟ ಜಾತಿ ಮೀಸಲಾತಿ, ವಾರ್ಡ್ಗಳನ್ನಾಗಿ ಆರಿಸಲಾಗಿದೆ. ದೇವರಮೆಟ್ಟು (4), ಪಳ್ಳತ್ತಡ್ಕ (7), ಮೆಡಿಕಲ್ ಕಾಲೇಜು ವಾರ್ಡ್ (8), ಬಾರಡ್ಕ (11), ಬದಿಯಡ್ಕ (12), ಪೆರಡಾಲ (13), ಚೆಡೇಕಲ್ (15), ಪುದುಕೋಳಿ (18), ತಲ್ಪಣಾಜೆ (19) ಮತ್ತು ಬೇಳ (20) ಎಂಬೀ ವಾರ್ಡ್ಗಳನ್ನು ಮಹಿಳಾ ಮೀಸಲಾತಿ ವಾರ್ಡ್ಗಳನ್ನಾಗಿ ಆಯ್ಕೆ ಮಾಡಲಾಗಿದೆ.
ಮೊಗ್ರಾಲ್ಪುತ್ತೂರು: ಮೊಗರು (1) ಪರಿಶಿಷ್ಟ ಜಾತಿ ಮೀಸಲಾತಿ ವಾರ್ಡ್, ಉಳಿದಂತೆ ಕಂಬಾರು (4), ಉಜಿರೆಕರೆ ಮಜಲ್ (5) ಪೆರ್ನಡ್ಕ ಪಾಯಿಚ್ಚಾಲ್ (8), ಗುವೆತ್ತಡ್ಕ (9), ಎರಿಯಾಲ್ (11), ಕುಳಂಗರೆ (12), ಕಲ್ಲಂಗೈ (15), ಶಾಸ್ತಾನಗರ (16) ಮತ್ತು ಮೊಗ್ರಾಲ್ ಪುತ್ತೂರು (17) ಎಂಬಿವುಗಳನ್ನು ಮಹಿಳಾ ವಾರ್ಡ್ಗಳನ್ನಾಗಿ ಆರಿಸಲಾಗಿದೆ.
ಮಧೂರು: ಭಗವತಿ ನಗರ (23) ಪರಿಶಿಷ್ಟ ಜಾತಿ ಮೀಸಲಾತಿ, ಏರಿಕ್ಕಳ (3), ಕೊಲ್ಲಂಗಾನ (5), ಉಳಿಯ (6), ಹಿದಾಯತ್ ನಗರ ನೋರ್ತ್ (8), ಹಿದಾಯತ್ ನಗರ ಸೌತ್ (9), ಚೆಟ್ಟುಂಗುಳಿ (10), ಚೂರಿ (14), ಸೂರ್ಲು (15), ರಾಮದಾಸನಗರ (18), ಪಂಚಾಯತ್ ಆಫೀಸ್ ವಾರ್ಡ್ (20), ಉಳಿಯತ್ತಡ್ಕ (21), ನ್ಯಾಷನಲ್ನಗರ (22) ಎಂಬಿವುಗಳನ್ನು ಮಹಿಳಾ ಮೀಸಲಾತಿ ವಾರ್ಡ್ಗಳಾಗಿ ಘೋಷಿಸಲಾಗಿದೆ.
ಚೆಮ್ನಾಡ್: ಕೊಡಕ್ಕಾಲ್ (17) ಪರಿಶಿಷ್ಟ ಜಾತಿ ಮೀಸಲಾತಿ ಮತ್ತು ಚೆಮ್ನಾಡ್ (1), ಆಲಿಚ್ಚೇರಿ (2), ಪೆರುಂಬಳ (3), ಕೋಳಿಯಡ್ಕ (5), ಕಡಪಳ್ಳಂ (6), ಪುತ್ತರಿಯಡ್ಕ (8), ತೆಕ್ಕಿಲ್ ಪರಂಬ (9), ಪರಂಬ್ (10), ಪೊಯಿನಾಚಿ (11), ಮೇಲ್ಪರಂಬ (19), ಚಂದ್ರಗಿರಿ (22) ಮತ್ತು ಪರವನಡ್ಕ ಎಂಬೀ ವಾರ್ಡ್ಗಳನ್ನು ಮಹಿಳಾ ಮೀಸಲಾತಿ ವಾರ್ಡ್ಗಳನ್ನಾಗಿ ಆರಿಸಲಾಗಿದೆ.
ಚೆಂಗಳ: ಪಡಿಞಾರಮೂಲೆ (21) ಪರಿಶಿಷ್ಟ ಜಾತಿ ಮೀಸಲಾತಿ, ಕಲ್ಲಕಟ್ಟ (1), ಅಡ್ಕ (2), ನೆಲ್ಲಿಕಟ್ಟೆ (3), ನಾರಂಪಾಡಿ (5), ಅರ್ಲಡ್ಕ (6), ಎದ್ರುತ್ತೋಡು (8), ಎಡನೀರು (9), ಚೆರ್ಕಳ ಈಸ್ಟ್ (13), ಕುಂಡಡ್ಕ (16), ಬೇವಿಂಜೆ (17), ಚೆಂಗಳ (19) ಮತ್ತು ಮಾರಾಪಾಣಳಂ (20) ಎಂಬೀ ವಾರ್ಡ್ಗಳನ್ನು ಮಹಿಳಾ ಮೀಸಲಾತಿ ವಾರ್ಡ್ಗಳಾಗಿ ಆರಿಸಲಾಗಿದೆ.
ಇದರ ಹೊರತಾಗಿ ಕಯ್ಯೂರು-ಚೀಮೇನಿ, ಚೆರುವತ್ತೂರು ವಲಿಯ ಪರಂಬು, ಪಡನ್ನ, ಪಿಲಿಕ್ಕೋಡು, ತೃಕರಿಪುರ, ಕೋಡೋಂ ಬೇಳೂರು, ಕಳ್ಳಾರ್, ಪನ ತ್ತಡಿ, ಬಳಾಲ್, ಕಿನಾನೂರು ಕರಿಂದಳಂ, ವೆಸ್ಟ್ ಎಳೇರಿ ಮತ್ತು ಈಸ್ಟ್ ಎಳೇರಿ ಪಂಚಾಯತ್ ಗಳ ಮೀಸಲಾತಿ ವಾರ್ಡ್ಗಳನ್ನು ನಿನ್ನೆ ಆರಿಸಲಾಯಿತು.
ಬ್ಲೋಕ್ ಪಂಚಾಯತ್ಗಳು, ನಗರಸಭೆಗಳು ಮತ್ತು ಜಿಲ್ಲಾ ಪಂಚಾಯತ್ನ ಮೀಸಲಾತಿ ವಾರ್ಡ್ಗಳ ಆಯ್ಕೆ ಇನ್ನೂ ಬಾಕಿ ಉಳಿದುಕೊಂಡಿದೆ. ಅದು ನಡೆದ ಬಳಿಕ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಮೀಸಲಾತಿ ವಾರ್ಡ್ಗಳ ಆಯ್ಕೆ ಪೂರ್ಣಗೊಳ್ಳಲಿದೆ.

RELATED NEWS

You cannot copy contents of this page