ರಸ್ತೆಗೆ ಅಡ್ಡವಾಗಿ ಓಡಿದ ಮುಳ್ಳುಹಂದಿ: ಬೈಕ್ ಮಗುಚಿ ಬಿದ್ದು ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗೆ ಗಂಭೀರ

ಕಾಸರಗೋಡು: ಮುಳ್ಳುಹಂದಿ  ರಸ್ತೆಗೆ ಅಡ್ಡವಾಗಿ ಓಡುತ್ತಿದ್ದ ವೇಳೆ ಆ ದಾರಿಯಾಗಿ ಬಂದ ಬೈಕ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದು  ಚಾಲಕ ಕೆಎಸ್‌ಆರ್‌ಟಿಸಿ  ಸಿಬ್ಬಂದಿ, ಭೀಮನಡಿ ಬಳಿ ನಿವಾಸಿ ಕೆ. ಬಿಜು (32) ಗಾಯಗೊಂಡಿದ್ದಾರೆ.  ಇವರು ನಿನ್ನೆ ಬೈಕ್‌ನಲ್ಲಿ  ಪರಪ್ಪ ಆಯು ರ್ವೇದ ಆಸ್ಪತ್ರೆ ಬಳಿ ತಲುಪಿದಾಗ  ಮುಳ್ಳುಹಂದಿ ರಸ್ತೆಗೆ ಅಡ್ಡವಾಗಿ ಓಡಿದೆ. ಆಗ ಬೈಕ್ ನಿಯಂತ್ರಣತಪ್ಪಿ ಮಗುಚಿ ಬಿದ್ದು ಗಂಭೀರ ಗಾಯ ಗೊಂಡ ಬಿಜುರನ್ನು ತಕ್ಷಣ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು.  ನಂತರ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಿ ಅಲ್ಲಿ ದಾಖಲಿಸಲಾಯಿತು.

RELATED NEWS

You cannot copy contents of this page