ವರ್ಕಾಡಿ: ಬಾಳೆಪುಣಿ ಮುದುಂಗಾರುಕಟ್ಟೆ ಬಸ್ ತಂಗುದಾಣ ಬಳಿ ಯುವಕನೋರ್ವನ ಮೃತದೇಹ ಪತ್ತೆಯಾಗಿದ್ದು, ಮಹಜರಿಗಾಗಿ ಕೊಂಡೊಯ್ಯಲಾಗಿದೆ. ಮುದುಂ ಗಾರು ಕಟ್ಟೆ ಬಳಿಯ ಪಾತೂರು ನಿವಾಸಿ ಮುಹಮ್ಮದ್ ನಿಯಾಸ್ (28) ಮೃತಪಟ್ಟ ಯುವಕನೆಂದು ಪತ್ತೆಹಚ್ಚಲಾಗಿದೆ. ಈತ ಕೋಣಾಜೆ ಠಾಣೆ ವ್ಯಾಪ್ತಿಯ ಸರ ಕಳ್ಳತನದ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮಾದಕ ಪದಾರ್ಥ ವ್ಯಸನದಿಂದ ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದೆ. ನಿನ್ನೆ ಮಧ್ಯಾಹ್ನ ಬಸ್ ತಂಗುದಾಣದ ಸಮೀಪ ಸ್ಕೂಟರ್ ನಿಲ್ಲಿಸಲೆಂದು ಹೋಗಿದ್ದ ವ್ಯಕ್ತಿ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಆ ಬಳಿಕ ಸ್ಥಳೀಯರು ಸೇರಿ ಪರಿಶೀಲಿಸಿದಾಗ ಮೃತ ವ್ಯಕ್ತಿ ನಿಯಾಸ್ ಎಂದು ತಿಳಿದು ಬಂದಿತ್ತು. ಕೂಲಿ ಕಾರ್ಮಿಕನಾದ ಈತ ಮಾದಕ ಪದಾರ್ಥ ವ್ಯಸನಿಯಾಗಿದ್ದನೆಂದು ಹೇಳಲಾಗುತ್ತಿದೆ.







