ಮೊಗ್ರಾಲ್: ಇಲ್ಲಿನ ಚಾಳಿಯಂ ಗೋಡ್ ನಿಶಾದ್ ಕ್ವಾರ್ಟರ್ಸ್‌ನ ಮೀನು ಮಾರಾಟ ಕಾರ್ಮಿಕ ಪಿ. ಶರೀಫ್ ಹಸೈನಾರ್‌ರ ಮನೆಯ ಫ್ರಿಡ್ಜ್ ಹೊತ್ತಿ ಉರಿದಿದೆ. ಶಾರ್ಟ್ ಸರ್ಕ್ಯೂಟ್ ಆಗಿರಬೇಕೆಂದು ಶಂಕಿಸಲಾಗಿದೆ. ನಿನ್ನೆ ಸಂಜೆ ಘಟನೆ ನಡೆದಿದೆ. ಫ್ರಿಡ್ಜ್‌ಗೆ ಬೆಂಕಿ ತಗಲಿದ ಸಮಯದಲ್ಲಿ ಯಾರೂ ಇರಲಿಲ್ಲ. ಶರೀಫ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದರು. ಕೊಠಡಿಯೊಳಗೆ ಹೊಗೆ ಕಂಡ ಸಮೀಪ ನಿವಾಸಿಗಳು ಅಡುಗೆ ಕೋಣೆ ಭಾಗದ ಬಾಗಿಲು ಮುರಿದು ಒಳಗೆ ನುಗ್ಗಿ ಬೆಂಕಿ ನಂದಿಸಿದ್ದಾರೆ. ಆ ವೇಳೆ ಫ್ರಿಡ್ಜ್ ಸಂಪೂರ್ಣ ಉರಿದು ಹೋಗಿತ್ತು.







